ಸಿದ್ದಾಪುರ, ಡಿ. 23: ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ಅಧ್ಯಕ್ಷರಾಗಿ ವಿ.ಕೆ ಲೋಕೇಶ್ ಆಯ್ಕೆಯಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ಎಸ್.ಎನ್.ಡಿ.ಪಿ. ಅಧ್ಯಕ್ಷರಾಗಿ ಕೆ.ಎನ್. ವಾಸು ಮುಂದುವರೆದಿದ್ದು, ಇದೀಗ ಎಸ್.ಎನ್.ಡಿ.ಪಿ.ಯಲ್ಲಿ ಬದಲಾವಣೆ ಯ ಗಾಳಿ ಬೀಸಿದೆ. ಕಳೆದ ಕೆಲವು ವಾರಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಚುನಾವಣೆಗೆ ತೆರೆ ಬಿದ್ದಿದ್ದು, ವಿ.ಕೆ. ಲೋಕೇಶ್ ಗೆಲವು ಸಾಧಿಸಿದ್ದಾರೆ.ಮತ ಎಣಿಕೆಯ ಸಂದರ್ಭ ಕೆ.ಎನ್. ವಾಸು 231 ಮತವನ್ನು ಪಡೆದರೆ, ಪ್ರತಿಸ್ಪರ್ಧಿ ವಿ.ಕೆ. ಲೋಕೇಶ್ 369 ಮತಗಳನ್ನು ಪಡೆದು ಜಯಶಾಲಿಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಕಿಶೋರ್ ಕೆ. ವಾಸು ಹಾಗೂ ಆರ್. ರಾಜನ್ ಸ್ಪರ್ಧಿಸಿದ್ದು, 86 ಮತಗಳ ಅಂತರದಲ್ಲಿ ಆರ್. ರಾಜನ್ ಜಯಗಳಿಸಿದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಶಿವಪ್ರಸಾದ್ 355 ಮತಗಳನ್ನು ಪಡೆದಿದ್ದರೆ, ಪ್ರತಿಸ್ಪರ್ಧಿ ಕೆ.ಆರ್. ಶಶಿ 245 ಮತಗಳನ್ನು ಪಡೆದು ಸೋಲನುಭವಿಸಿದರು.

ಯೋಗಂ ನಿರ್ದೇಶಕರಾಗಿ ಶಂಕರನಾರಾಯಣ (347), ಕೆ.ಎನ್. ಮೋಹನನ್ (326), ಪಂಚಾಯಿತಿ ಪ್ರತಿನಿಧಿಯಾಗಿ ಸಿ.ವಿ. ನಾರಾಯಣ್ (339), ದಾಮೋದರ್ (348) ಅಧಿಕ ಮತವನ್ನು ಪಡೆದು ಆಯ್ಕೆಯಾದರು.

ಚುನಾವಣಾ ಮತ ಎಣಿಕೆಯ ಬಳಿಕ ವಿ.ಕೆ. ಲೇಕೇಶ್ ತಂಡ ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿತು.

ಪ್ರತಿಭಟನೆ: ಅಮ್ಮತ್ತಿ ಗ್ರಾ.ಪಂ ವ್ಯಾಪ್ತಿಯ ಪುಲಿಯೇರಿ ಶಾಖೆಯ ಪದಾಧಿಕಾರಿಗಳಿಗೆ ಮತದಾನದ ಹಕ್ಕನ್ನು ನೀಡಿಲ್ಲ ಎಂದು ಶಾಖೆಯ ಪದಾಧಿಕಾರಿಗಳು ಎಸ್.ಎನ್.ಡಿ.ಪಿ. ಕಟ್ಟಡದ ಮುಂಭಾಗದಲ್ಲಿ ಕಪ್ಪುಪಟ್ಟಿ ಧರಿಸಿ, ಪ್ರತಿಭಟನೆ ನಡೆಸಿದರು.

-ವಾಸು