ವೀರಾಜಪೇಟೆ. ಡಿ. 23 : ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಎಡ್. ಪರೀಕ್ಷೆಯಲ್ಲಿ ವೀರಾಜ ಪೇಟೆ ಸರ್ವೋದಯ ಶಿಕ್ಷಕರ ಮಹಾವಿದ್ಯಾಲಯದ ವಿದ್ಯಾರ್ಥಿನಿ ಬಿ. ಹೆಚ್. ಶ್ರುತಿ ಜಿಲ್ಲೆಗೆ ಪ್ರಥಮ ಮತ್ತು ವಿಶ್ವವಿದ್ಯಾನಿಲಯ ಮಟ್ಟದಲ್ಲಿ 7ನೇ ರ್ಯಾಂಕ್ ಪಡೆದಿರುತ್ತಾಳೆ. ಈಕೆ ಬಿಳುಗುಂದ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಹೆಚ್. ಜಿ. ಸಾವಿತ್ರಿ ಹಾಗೂ ಮೂರ್ನಾಡು ಸಿಂಡಿಕೇಟ್ ಬ್ಯಾಂಕ್ ಪಿಗ್ಮಿ ಸಂಗ್ರಹಗಾರ ಹರೀಶ್ ಅವರ ಪುತ್ರಿ.