ಸೋಮವಾರಪೇಟೆ, ಡಿ. 23: ಜೇಸೀ ಸಂಸ್ಥೆಯ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದ ಸಾಕ್ಷಿ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಉಷಾರಾಣಿ ಗುರುಪ್ರಸಾದ್ ಅಧಿಕಾರ ಸ್ವೀಕರಿಸಿದರು. ಜೇಸೀ ವಲಯಾಧ್ಯಕ್ಷರಾದ ಸಮತ ಮಿಸ್ಕತ್ ಪದಗ್ರಹಣ ನೆರವೇರಿಸಿ ಮಾತನಾಡಿ, ಯುವ ಸಮುದಾಯಕ್ಕೆ ಸರಿಯಾದ ಮಾರ್ಗದರ್ಶನವನ್ನು ನೀಡಿ ದೇಶಕ್ಕೆ ಸತ್ಪ್ರಜೆಗಳನ್ನು ನೀಡುವ ನಿಟ್ಟಿನಲ್ಲಿ ಜೇಸೀ ಸಂಸ್ಥೆ ಶ್ರಮಿಸುತ್ತಿದೆ. ಜೇಸಿಯಿಂದ ನಾಯಕತ್ವ ಮತ್ತು ವ್ಯವಹಾರಿಕ ಜ್ಞಾನವನ್ನು ಕಲಿಯಬಹುದು ಎಂದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಪುರುಷೋತ್ತಮ್, ವಲಯ ಉಪಾಧ್ಯಕ್ಷ ಡಿ. ಪುನೀತ್, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ಸೋಮೇಶ್, ಜೇಸೀ ಕಾರ್ಯದರ್ಶಿ ಮಂಜುಳಾ ಸುಬ್ರಮಣಿ, ಖಜಾಂಚಿ ಪುಷ್ಪಕ್, ಜೂನಿಯರ್ ಜೇಸೀ ಅಧ್ಯಕ್ಷ ಬಿ.ಪಿ. ನಿಹಾಲ್ ಉಪಸ್ಥಿತರಿದ್ದರು.