*ಗೋಣಿಕೊಪ್ಪಲು, ಡಿ. 23 : ದಿಡೀರನೆ ಸಂಭವಿಸುವ ನೈಸರ್ಗಿಕ ವಿಕೋಪ, ಅಗ್ನಿ ಅವಘಡ, ಕಟ್ಟಡ ಕುಸಿತ ಹೀಗೆ ತುರ್ತು ಸಂದರ್ಭಗಳಲ್ಲಿ ತ್ವರಿತ ಕಾರ್ಯಾಚರಣೆಗೆ ತೊಡಗುವ ಗೋಣಿಕೊಪ್ಪಲು ಅಗ್ನಿಶಾಮಕ ದಳ ಇಲಾಖೆಗೆ ಕಳೆದ 10 ವರ್ಷಗಳಿಂದ ಸ್ವಂತ ಠಾಣೆ ಹೊಂದಲು ಸಾಧ್ಯ ವಾಗಿಲ್ಲ. ಇದರಿಂದ ಸಾರ್ವಜನಿಕ ಸೇವೆಯಿಂದ ದೂರ ಸರಿಯುವ ಆತಂಕ ಕಾಡುತ್ತಿದೆ. ರಾಜಕಾರಣಿಗಳ ಮತ್ತು ಹಿರಿಯ ಅಧಿಕಾರಿಗಳ ಭರವಸೆಯಲ್ಲೇ ಸ್ವಂತ ಠಾಣೆ ಹೊಂದುವ ಇಲ್ಲಿನ ಸಿಬ್ಬಂದಿಗಳ ಕನಸು ಸಾಗುತ್ತಿದೆ.10 ವರ್ಷಗಳಿಂದ ಕಿತ್ತಳೆ ಬೆಳೆಗಾರರ ಸಂಘದ ಉತ್ಪನ್ನ ಘಟಕದ ಆವರಣದಲ್ಲಿ ಸಣ್ಣ ಕೊಠಡಿಯಲ್ಲಿ ತಾತ್ಕಾಲಿಕ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಕಿತ್ತಳೆ ಬೆಳೆಗಾರರ ಸಂಘದ ಅಧ್ಯಕ್ಷ ಅರುಣ್ ಮಾಚಯ್ಯ ಅವರು ಇಲಾಖೆಗೆ ಉತ್ಪನ್ನ ಘಟಕದ ಆವರಣದಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸಿಕೊಟ್ಟಿದ್ದರಾದರೂ ಸ್ವಂತ ಕಟ್ಟಡ ಹೊಂದದೇ ಇರುವುದರಿಂದ ಇಲಾಖೆಗೆ ಸಂಬಂಧಪಟ್ಟ ಸಲಕರಣೆ ಗಳನ್ನು ಒಂದೆಡೆ ಕ್ರೋಢೀಕರಿಸಲು ಸಾಧ್ಯವಾಗುತ್ತಿಲ್ಲ. ಇರುವ ಸಣ್ಣ ಕೊಠಡಿಯಲ್ಲೇ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಆ ಕೊಠಡಿಯಲ್ಲೇ ಸಿಬ್ಬಂದಿಗಳ ಊಟ, ನಿದ್ರೆ ನಡೆಯುವುದರ ಜತೆಗೆ ನೀರು ತೆಗೆಯುವ ಮೋಟಾರ್, ನೀರಿನ ಕೊಳವೆ, ಜನರೇಟರ್, ನೀರಿಗೆ ಸಿಂಪಡಿಸುವ ಮದ್ದಿನ ಅಂಶಗಳು, ಸಿಬ್ಬಂದಿಗಳ ನಿತ್ಯೋಪಯೋಗಿ ವಸ್ತುಗಳ ಕಬ್ಬಿಣದ ಪೆಟ್ಟಿಗೆಗಳು, ಅವರ ಸಮವಸ್ತ್ರಗಳು ಒಂದೇ ಕೊಠಡಿಯಲ್ಲಿ ಇಡುವಂತಹ ಪರಿಸ್ಥಿತಿ.
ಹೀಗಾಗಿ ಸಲಕರಣೆಗಳನ್ನು ಪ್ರತ್ಯೇಕವಾಗಿಡಲು ಇಲಾಖೆಗೆ ಉಗ್ರಾಣ ಕೊಠಡಿಯ ಅವಶ್ಯಕತೆ ಎದ್ದು ಕಾಣುತ್ತಿದೆ. ಇನ್ನೂ 9 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಾನೀಯ ಇಲಾಖೆಯಲ್ಲಿ ಶೌಚಾಲಯವಿಲ್ಲ. ಕಿತ್ತಳೆ ಉತ್ಪನ್ನ ಘಟಕಕ್ಕೆ ಸಂಬಂಧಪಟ್ಟ ಶೌಚಾಲಯವನ್ನೇ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. ಆ ಶೌಚಾಲಯವು ಅನತಿ ದೂರದಲ್ಲಿದೆ.
ಇಲಾಖೆ ಸ್ವಂತ ಕಟ್ಟಡ ಹೊಂದಿದ್ದ ಪಕ್ಷದಲ್ಲಿ ಪ್ರತ್ಯೇಕ ದೂರವಾಣಿ
(ಮೊದಲ ಪುಟದಿಂದ) ಕ್ಯಾಂಪಸ್ ಫ್ರಂಟ್ ಮಾಜಿ ಜಿಲ್ಲಾಧ್ಯP À ತೈಸೀರ್ ಮಾತನಾಡಿ, ಸಿ.ಎ.ಎ, ಹಾಗೂ ಎನ್.ಆರ್.ಸಿ, ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ, ಜಾತಿ-ಧರ್ಮ ವಿಭಜಿಸಿ ಪೌರತ್ವ ನೀಡುವುದು ಸಂವಿಧಾನ ಭಾಹಿರ ಎಂದು ಅಭಿಪ್ರಾಯ ಪಟ್ಟ ಅವರು ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಾವಶ್ಯಕ ಎಂದರು
ಈ ಸಂದರ್ಭ ಕ್ಯಾಂಪಸ್ ಫ್ರಂಟ್ ಕೊಡಗು ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ, ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.