ಗೋಣಿಕೊಪ್ಪಲು, ಡಿ.23: ತಮ್ಮ ಬಂದೂಕುಗಳು ಸದುದ್ದೇಶಕಷ್ಟೇ ಬಳಕೆಯಾಗಲಿ ಎಂದು ಮಡಿಕೇರಿಯ ಸÀಶಸ್ತ್ರ ದಳದ ಮುಖ್ಯಸ್ಥ ರಾಚಯ್ಯ ಅಭಿಪ್ರಾಯಪಟ್ಟರು ಗೋಣಿಕೊಪ್ಪ ಪ್ರಕಾಶ್ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆದ ನಾಗರೀಕ ಬಂದೂಕು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ತಮ್ಮ ತಂದೆ ತಾಯಿಯ ಹೆಸರಿನಲ್ಲಿರುವ ಬಂದೂಕುಗಳನ್ನು ಬಳಸಲು ಇಂತಹ ತರಬೇತಿಗಳು ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ದ.ಕೊಡಗಿನ ಗೋಣಿಕೊಪ್ಪ ನಗರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಇಂತಹ ಕಾರ್ಯ ಕ್ರಮವನ್ನು ಆಯೋಜಿ ಸಲಾಗಿದೆ ಇದರ ಪ್ರಯೋಜನ ಪಡೆಯುವಂತೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಗೋಣಿಕೊಪ್ಪ ವೃತ್ತ ನಿರೀಕ್ಷಕ ಎನ್.ಎನ್. ರಾಮರೆಡ್ಡಿ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಮೂಲಕ ತಮ್ಮ ದೈಹಿಕ ಸಾಮಾಥ್ರ್ಯ

ವನ್ನು ಹೆಚ್ಚು ಮಾಡಿಕೊಳ್ಳಲು ಅವಕಾಶವಿದೆ. ಬಂದೂಕುಗಳನ್ನು ಸುರಕ್ಷಿತವಾಗಿ ಕಾಪಾಡಲು ಹಾಗೂ ಬಳಸಲು ತರಬೇತಿಯಲ್ಲಿ ಹೇಳಿಕೊಡ ಲಾಗುವುದು. ವನ್ಯ ಜೀವಿಗಳಿಂದ ರಕ್ಷಣೆ ಪಡೆಯಲು ಬಂದೂಕುಗಳು ಇದ್ದರೂ ತರಬೇತಿ ಇಲ್ಲದೆ

(ಮೊದಲ ಪುಟದಿಂದ) ಇದನ್ನು ಬಳಸಲು ಆಗುತ್ತಿಲ್ಲ ಈ ಕಾರಣದಿಂದ ವೀರಾಜಪೇಟೆ ಉಪ ವಿಭಾಗದ ವತಿಯಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ತರಬೇತಿದಾರ ಹಾಗೂ ಸಹಾಯಕ ಉಪ ನಿರೀಕ್ಷಕ ವೆಂಕಪ್ಪ ಮಾತನಾಡಿ ಐದು ದಿನಗಳ ತರಬೆÉೀತಿಯಲ್ಲಿ ಬಂದೂಕು ನಿರ್ವಹಣೆಯ ಬಗ್ಗೆ ವಿವರ ನೀಡಲಾಗುವುದು ಇಲಾಖೆಯ ನಿಯಮಗಳನ್ನು ತರಬೇತಿದಾರರು ತಪ್ಪದೆ ಪಾಲಿಸಬೇಕು. ಅಂತಿಮ ದಿನದಂದು ಅತ್ಯುತ್ತಮ ಪ್ರದರ್ಶನ ನೀಡಿದ ಮೂರು ಮಂದಿಗೆ ಬಹುಮಾನಗಳನ್ನು ನೀಡಲಾಗುವುದು.

ಅರ್ಹರಿಗೆ ಇಲಾಖೆ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಮಾಣ ಪತ್ರ ವಿತರಿಸಲಿದ್ದಾರೆ ಎಂದರು. ವೇದಿಕೆಯಲ್ಲಿ ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿಗಳಾದ ಧನಪತಿ, ಮಂಜುಶಾಲಿಯಾನ್, ಮುಂತಾದವರು ಹಾಜರಿದ್ದರು.

ವೀರಾಜಪೇಟೆ ಉಪ ವಿಭಾಗದ ಕುಟ್ಟ, ಶ್ರೀಮಂಗಲ, ಹುದಿಕೇರಿ, ಬಾಳೆಲೆ, ತಿತಿಮತಿ, ಗೋಣಿಕೊಪ್ಪ, ಭಾಗಗಳಿಂದ ಮಹಿಳೆಯರು ಸೇರಿದಂತೆ ನೂರಕ್ಕೂ ಅಧಿಕ ಮಂದಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಪ್ರಸನ್ನ ಕಾರ್ಯಕ್ರಮ ನಿರೂಪಿಸಿ, ಪದ್ಮಾವತಿ ಕುಸುಮಾ ಪ್ರಾರ್ಥಿಸಿ ಸುದೀಪ್ ಸ್ವಾಗತಿಸಿ ಸುಮನ್ ವಂದಿಸಿದರು.