ಮಡಿಕೇರಿ, ಡಿ. 23: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಚುನಾವಣೆ ಇರುವ ಸಹಕಾರ ಸಂಘಗಳ ರಿಟರ್ನಿಂಗ್ ಅಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳಿಗೆ ಸಹಕಾರಿ ಚುನಾವಣೆ ಕುರಿತಾದ ಶಿಕ್ಷಣ ಕಾರ್ಯಕ್ರಮವು ನಗರದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಎ.ಕೆ. ಮನುಮುತ್ತಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಚುನಾವಣೆ ಕುರಿತಾದ ಶಿಕ್ಷಣ ಕಾರ್ಯಕ್ರಮ ಸಹಕಾರ ಕ್ಷೇತ್ರ 114 ವರ್ಷಗಳಿಂದ ತನ್ನ ಕಾಣಿಕೆ ನೀಡುತ್ತದೆ. ಈ ಚಳುವಳಿ ದೇಶದ ಅಧಿಕ ಸಂಸ್ಥೆಯ ಬೆನ್ನೆಲುಬು ಎಂದರೆ ತಪ್ಪಾಗಲಾರದು ಎಂದರು. ಸಹಕಾರ ಕ್ಷೇತ್ರ ಇಡೀ ದೇಶದಲ್ಲಿ ಮಾದರಿಯಲ್ಲಿ ಅಸ್ತಿತ್ವದಲ್ಲಿದೆ ಹಾಗೂ ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಾಲಕಾಲಕ್ಕೆ ಅನುಕೂಲವಾಗುವಂತೆ ತಿದ್ದುಪಡಿ ತರಲಾಗುತ್ತಿದೆ. ಕ್ಷೇತ್ರಕ್ಕೆ ಇನಷ್ಟು ಶಕ್ತಿ ತುಂಬಲು ರಚನಾತ್ಮಕವಾಗಿರುವ ಕಾನೂನು ತರಲಾಗಿದೆ. ಕಾಳಜಿ ತರಲು ಕಾಯ್ದೆ ಅಳವಡಿಸಿಕೊಂಡರು 2015 ರಿಂದ ಸದಸ್ಯರಾದವರಿಗೆ ನಿಯಮಗಳು ಇಲ್ಲ. ಇದು ದುರದೃಷ್ಟಕರ. ಆದ್ದರಿಂದ ಚುನಾವಣೆ ಸಂದರ್ಭದಲ್ಲಿ ಯಾವುದೇ ವಿಷಯಗಳನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎನ್.ಎ. ರವಿಬಸಪ್ಪ, ಕನ್ನಂಡ ಸಂಪತ್, ಹೆಚ್.ಡಿ. ರವಿಕುಮಾರ್ ಇತರರು ಪಾಲ್ಗೊಂಡಿದ್ದರು. ಯೂನಿಯನ್ ಸಿಇಒ ಯೋಗೇಂದ್ರನಾಯಕ್ ಸ್ವಾಗತಿಸಿದರು. ಮಂಜುಳಾ ಪ್ರಾರ್ಥಿಸಿದರು.