ಚೆಟ್ಟಳ್ಳಿ, ಡಿ. 23: ದಕ್ಷಿಣ ಭಾರತದ ಸಮನ್ವಯ ವಿದ್ಯಾ ಕೇಂದ್ರಗಳ ಲ್ಲೊಂದಾದ ಕಾಸರಗೋಡು ಜಿಲ್ಲೆಯ ಜಾಮಿಆ ಸಹದಿಯ್ಯಾ ಅರಬಿಯ್ಯಾ ಇದರ ಗೋಲ್ಡನ್ ಜ್ಯುಬಿಲಿ ಕಾರ್ಯಕ್ರಮವು ತಾ. 26 ರಿಂದ 28 ರವರೆಗೆ ಕಾಸರಗೋಡು ದೇಳಿಯಲ್ಲಿ ನಡೆಯಲಿದೆ.
ಇದರ ಸಂದೇಶ ಯಾತ್ರೆಗೆ ನಲ್ವತ್ತೇಕರೆ ಯೂನಿಟ್ ಎಸ್.ವೈ.ಎಸ್. ಹಾಗೂ ಎಸ್.ಎಸ್.ಎಫ್. ಅದ್ದೂರಿ ಸ್ವಾಗತ ನೀಡಿದರು. ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಎಸ್.ಎಸ್.ಎಫ್. ಉಪಾಧ್ಯಕ್ಷ ಶಾಫಿ ಸಹದಿ ಸೋಮವಾರಪೇಟೆ, ಗೋಲ್ಡನ್ ಜ್ಯುಬಿಲಿ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಅತೀ ಹೆಚ್ಚು ಜನಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ಕೋರಿಕೊಂಡರು.
ಈ ಸಂದರ್ಭ ವೀರಾಜಪೇಟೆ ಎಸ್.ಎಸ್.ಎಫ್. ಅಧ್ಯಕ್ಷ ಜುಬೈರ್ ಸಹದಿ, ಹಂದು ಹಾಜಿ, ರಜಾಕ್ ಸಹದಿ, ಎಸ್.ಎಸ್.ಎಫ್. ಅಧ್ಯಕ್ಷ ಯೂಸುಫ್ ಝೈನಿ, ಸಲಾಂ ನಲವ್ವತ್ತೇಕರೆ, ಮನಾಫ್, ನೌಫಲ್, ರಫೀಕ್, ಸುಲೈಮಾನ್ ಸಹದಿ, ಮುಸ್ತಫಾ, ಮಹಮ್ಮದ್, ಹಂಸ ಸಹದಿ, ಯೂಸುಫ್ ಹಾಗೂ ಸುಲೈಮಾನ್ ಇದ್ದರು.