ಪೊನ್ನಂಪೇಟೆ, ಡಿ. 23: ಟಿ.ಶೆಟ್ಟಿಗೇರಿ ಕ್ಲಸ್ಟರಿನ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರಾಜಪೇಟೆ ತಾಲೂಕಿನ ಆಯ್ದ ಶಾಲೆಗಳ ನಲಿ-ಕಲಿ ಬೋಧಿಸುವ 50 ಅತಿಥಿ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ ವತಿಯಿಂದ ಎರಡು ದಿನಗಳ ಕಾಲ ತರಬೇತಿ ಶಿಬಿರವನ್ನು ಆಯೋಜಿಸ ಲಾಗಿತ್ತು. ಈ ತರಬೇತಿಯಲ್ಲಿ ಕನ್ನಡ, ಗಣಿತ, ಪೊನ್ನಂಪೇಟೆ, ಡಿ. 23: ಟಿ.ಶೆಟ್ಟಿಗೇರಿ ಕ್ಲಸ್ಟರಿನ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರಾಜಪೇಟೆ ತಾಲೂಕಿನ ಆಯ್ದ ಶಾಲೆಗಳ ನಲಿ-ಕಲಿ ಬೋಧಿಸುವ 50 ಅತಿಥಿ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ ವತಿಯಿಂದ ಎರಡು ದಿನಗಳ ಕಾಲ ತರಬೇತಿ ಶಿಬಿರವನ್ನು ಆಯೋಜಿಸ ಲಾಗಿತ್ತು. ಈ ತರಬೇತಿಯಲ್ಲಿ ಕನ್ನಡ, ಗಣಿತ, ಇವುಗಳ ಬಗ್ಗೆ ಮಾಹಿತಿ ನೀಡಲಾಯಿತು. ಶಿಬಿರಾರ್ಥಿಗಳು ಉತ್ಸಾಹ ಹಾಗೂ ಕ್ರಿಯಾಶೀಲರಾಗಿ ಭಾಗವಹಿಸಿದ್ದರು. ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಎಂ.ಟಿ. ಸುಮ ಹಾಗೂ ಕೆ.ಇ.ಸಪೂರ ಕಾರ್ಯನಿರ್ವಹಿಸಿದರು. ಬಿ.ಆರ್.ಪಿ. ವಿ.ಡಿ. ಉತ್ತಪ್ಪ, ಬಿ.ಆರ್.ಪಿ. ಜೈಸಿ ಜೋಸೆಫ್, ಸಿಆರ್.ಪಿ. ತಿರುನೆಲ್ಲಿಮಾಡ ಜೀವನ್, ಪುಷ್ಪ, ಬೇಗೂರು ಶಾಲೆಯ ಮುಖ್ಯ ಶಿಕ್ಷಕಿ ಈ.ಎಸ್. ಸುಜಾತ ಹಾಗೂ ಸಹಶಿಕ್ಷಕಿಯರು ಭಾಗವಹಿಸಿ ದ್ದರು.