ಮಡಿಕೇರಿ, ಡಿ. 23: ಬಾಲಭವನ ಸೊಸೈಟಿ, ಕೊಡಗು ಜಿಲ್ಲಾ ಬಾಲಭವನ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮವು ಶನಿವಾರ ನಗರದ ಭಾರತೀಯ ವಿದ್ಯಾಭವನ ವೇದಾಂತ ಸಂಘದ ಸಭಾಂಗಣದಲ್ಲಿ ನಡೆಯಿತು. ಅಭಿರಂಗ ಮಕ್ಕಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ಮಕ್ಕಳು ಶಿಕ್ಷಣದ ಜೊತೆಗೆ ಸಾಂಸ್ಕøತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕಿಯರ ಬಾಲ ಮಂದಿರ, ಬಾಲಕರ ಬಾಲ ಮಂದಿರ, ಶಿಶು ಸಂಸ್ಥೆಯ ಮಕ್ಕಳು ನೀಲಿ ರಿಬ್ಬನ್, ನೀರೋ ನೀರು, ಪ್ಲಾಸ್ಟಿಕ್ ಭೂತ ಎಂಬ ಬೀದಿ ನಾಟಕ ಹಾಗೂ ಕೆಂಪು ಹೂ, ಹಕ್ಕಿ ಹಾಡು, ಸಂಗೀತವನ್ನು ರಂಗಪ್ರದರ್ಶನ ಮಾಡಿದರು.