ಮಡಿಕೇರಿ, ಡಿ. 23: ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ ಸಭೆ ತಾಲೂಕು ಅಧ್ಯಕ್ಷÀ ವಿ.ಜಿ. ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಕ್ರಮಕೈಗೊಳ್ಳಲು ಸಭೆ ನಿರ್ಣಯ ಕೈಗೊಂಡಿತು.

ಮೂರ್ನಾಡು ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ತಾಲೂಕಿನ ಪ್ರತಿಭಾವಂತ ಒಕ್ಕಲಿಗ ವಿದ್ಯಾರ್ಥಿಗಳಿಗೆ ಸಂಘದ ಹಿತೈಷಿ ಹಾಗೂ ಹಿರಿಯರಾದ ದೀರ್ಘಕೇಶಿ ಶಿವಣ್ಣ ಅವರು ನೀಡಿದ ಪೆÇ್ರೀತ್ಸಾಹ ಧನ ಮತ್ತು ಪ್ರಶಂಸನಾ ಪತ್ರವನ್ನು ಹಸ್ತಾಂತರಿಸಿ ಸನ್ಮಾನಿಸಲಾಯಿತು.

ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದ ಖ್ಯಾತ ಮಕ್ಕಳ ತಜ್ಞ ಡಾ. ಬಿ.ಸಿ. ನವೀನ್‍ಕುಮಾರ್ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ದೇಣಿಗೆ ನೀಡುವುದಾಗಿ ಘೋಷಿಸಿದರು. ದೀರ್ಘಕೇಶಿ ಶಿವಣ್ಣ ಅವರು ಮಾತನಾಡಿ ಸಂಘದ ಬಲವರ್ಧನೆಗೆ ಅನೇಕ ಸಲಹೆ ಸೂಚನೆಗಳನ್ನು ನೀಡಿದರು. ತಾವು ಕೂಡ ಧನಸಹಾಯ ನೀಡುವುದಾಗಿ ತಿಳಿಸಿದರು.

ಸಂಘದ ಮಾಜಿ ಅಧ್ಯಕ್ಷ ಎಂ.ಪಿ. ಕೃಷ್ಣರಾಜು ಮಾತನಾಡಿ ಸಂಘದ ಸ್ವಂತ ಕಟ್ಟಡಕ್ಕಾಗಿ ದೇಣಿಗೆ ಸಂಗ್ರಹಣೆ ಮಾಡಿ ಕೊಡುವುದಾಗಿ ಭರವಸೆ ನೀಡಿದರು.

ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಕುಶಾಲಪ್ಪ ಮಂಡಿಸಿದರು, ಲೆಕ್ಕಪತ್ರವನ್ನು ಖಜಾಂಚಿ ಕೆ. ರಮೇಶ್ ಸಭೆಯ ಮುಂದೆ ಮಂಡಿಸಿ ಒಪ್ಪಿಗೆ ಪಡೆದರು. ಜನ್ಯಶ್ರೀ ಪ್ರಾರ್ಥಿಸಿ, ಮಂಜುನಾಥ್ ಸ್ವಾಗತಿಸಿ, ನಿರ್ದೇಶಕ ಎಸ್.ಎಲ್. ಬಸವರಾಜು ವಂದಿಸಿದರು. ಮೃತಪಟ್ಟ ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ಸಭೆಯ ನಂತರ ಜನಾಂಗದ ಬಂಧುಗಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಂಘದ ಕಾರ್ಯಾಧ್ಯಕ್ಷ ವಿ.ಪಿ. ಸುರೇಶ್, ಉಪಾಧ್ಯಕ್ಷ ವಿಜಯ ಕುಮಾರ್, ಮೋಹನ್‍ಕುಮಾರ್ ಸಹ ಕಾರ್ಯದರ್ಶಿ ಮನುಕುಮಾರ್, ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಉಮೇಶ್ ಕುಮಾರ್, ನಿರ್ದೇಶಕರುಗಳಾದ ಆನಂದ್, ಶಿವಕುಮಾರ್, ಲಲಿತಮ್ಮ, ಶಿವಕುಮಾರಿ, ಸತೀಶ್, ದಿನೇಶ್ ಪಾಲೂರು, ಧನಂಜಯ, ಲಕ್ಷ್ಮೀಶ್ ಕೆರೆಮನೆ, ರಾಮಮೂರ್ತಿ, ಶೋಭಾ, ಸತೀಶ್, ಪುಟ್ಟರಾಜು, ಗೌರವ ಅಧ್ಯಕ್ಷÀ ಎಂ.ಆರ್. ಗೋಪಿನಾಥ್, ಗೌರವ ಪೆÇೀಷಕÀ ವಿ.ಜೆ. ದೇವೇಂದ್ರ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.