ಮಡಿಕೇರಿ, ಡಿ. 21: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆ ನೋಡಲ್ ಅಧಿಕಾರಿ ಬಾಲಕೃಷ್ಣ ರೈ ಅಧ್ಯಕ್ಷತೆಯಲ್ಲಿ ಮತ್ತು ಪಂಚಾಯಿತಿ ಅಧ್ಯಕ್ಷ ಹೆಚ್.ಈ. ಅಬ್ಬಾಸ್ ಸಮ್ಮುಖದಲ್ಲಿ ನೆರವೇರಿತು.
ಸಾಮಾಜಿಕ ಲೆಕ್ಕ ಪರಿಶೋಧನೆ ಅಧಿಕಾರಿ ಪ್ರೀತಂ ಪೊನ್ನಪ್ಪ ಮತ್ತು ಸಲಾಂ ಅವರು ಸಭೆಯಲ್ಲಿ ಲೆಕ್ಕ ಪರಿಶೋಧನೆ ಮಾಹಿತಿ ನೀಡಿದರು. ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮ ಸದಸ್ಯರುಗಳಾದ ಎನ್.ಡಿ. ನಂಜಪ್ಪ, ಜಯಲಕ್ಷ್ಮಿ, ಲಲಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ. ಗಿರೀಶ್, ಕಾರ್ಯದರ್ಶಿ ಪಿ.ಕೆ. ಸುಕುಮಾರ, ಪಂಚಾಯಿತಿ ಸಿಬ್ಬಂದಿಗಳು ಅಣ್ಣಪ್ಪ, ಧನಂಜಯ, ಡಾಟ ಆಪರೇಟರ್ ಧನ್ಯ ಹಾಗೂ ಸಾರ್ವಜನಿಕರು ಹಾಜರಿದ್ದರು.