ಸೋಮವಾರಪೇಟೆ,ಡಿ.20: ಮನೆಯಲ್ಲಿ ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆಗೆ ಶರಣಾ ಗಿರುವ ಘಟನೆ ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಮಸೀದಿ ಸಮೀಪದ ಮನೆ ಯೊಂದರಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮಡಿಕೇರಿ ರಸ್ತೆ ನಿವಾಸಿ, ಖಾಸಗಿ ಬಸ್ ಚಾಲಕ ಗೋಪಾಲ ಎಂಬವರ ಪುತ್ರ ಮೇಘನ್ (ಮೊದಲ ಪುಟದಿಂದ) (ಮ್ಯಾಗಿ-20) ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ. ಪಟ್ಟಣದ ಖಾಸಗಿ ಏಜೆನ್ಸಿಯೊಂದರಲ್ಲಿ ಕಳೆದ ಕೆಲ ತಿಂಗಳುಗಳಿಂದ ಕೆಲಸ ಮಾಡುತ್ತಿದ್ದ ಮೇಘನ್, ಮೊನ್ನೆ ದಿನ ಮಂಗಳೂರಿಗೆ ತೆರಳಿ ನಿನ್ನೆ ರಾತ್ರಿ ಮನೆಗೆ ಹಿಂತಿರುಗಿದ್ದ. ಇಂದು ಮಧ್ಯಾಹ್ನ ತನ್ನ ತಂದೆಯೊಂದಿಗೆ ಬ್ಯಾಂಕ್ ಗೆ ತೆರಳಿದ್ದು, ಅಲ್ಲಿಂದ ಮನೆಗೆ ವಾಪಸ್ಸಾದ ಸಂದರ್ಭ, ಮನೆಯೊಳಗೆ ನೇಣು ಬಿಗಿದುಕೊಂಡಿದ್ದಾನೆ.ಬ್ಯಾಂಕಿನಿಂದ ಕೊಂಚ ತಡವಾಗಿ ಮನೆಗೆ ಬಂದ ತಂದೆ ಗೋಪಾಲ್ ಅವರಿಗೆ ಘಟನೆ ಕಂಡು ಬಂದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿದೆ. ಕಳೆದ ಮೂರು ತಿಂಗಳ ಹಿಂದಷ್ಟೇ ಮೇಘನ್‍ನ ತಾಯಿ, ಅಂಗನವಾಡಿ ಶಿಕ್ಷಕಿ ಇಂದ್ರಾಣಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಮರಣಾನಂತರ ಬರಬೇಕಿದ್ದ ರೂ.30 ಸಾವಿರ ಹಣಕ್ಕಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಇಲಾಖೆಯಿಂದ ಮೇಘನ್‍ಗೆ ಮಾಹಿತಿ ನೀಡಲಾಗಿತ್ತು. ಮೊನ್ನೆಯೂ ಸಹ ಅಗತ್ಯ ದಾಖಲಾತಿಗಳನ್ನು ನೀಡುವಂತೆ ತಿಳಿಸಲಾಗಿತ್ತು. ಆದರೂ ಸಹ ಇಲಾಖೆಗೆ ಈವರೆಗೆ ಯಾವದೇ ದಾಖಲಾತಿ ಸಲ್ಲಿಸಿರಲಿಲ್ಲ. ಈ ಮಧ್ಯೆ ಬ್ಯಾಂಕ್ ಗೆ ತೆರಳಿ ವಾಪಸ್ಸಾದ ನಂತರ ಮೇಘನ್ ಆತ್ಮಹತ್ಯೆಗೆ ಶರಣಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.