ಮಡಿಕೇರಿ, ಡಿ.19 : ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪೌರತ್ವ ನೋಂದಣಿ ಕಾಯ್ದೆಯಿಂದ ರಾಜ್ಯದ ಮುಸ್ಲಿಮರಿಗೆ ತೊಂದರೆಯಾದರೆ ಬೀದಿಗಿಳಿದು ಹೋರಾಟ ಮಾಡಲು ಜಾತ್ಯತೀತ ಜನತಾದಳ (ಜೆಡಿಎಸ್) ಸಿದ್ಧವಿದೆ ಎಂದು ಪಕ್ಷದ ಜಿಲ್ಲಾ ಘಟಕ ಘೋಷಿಸಿದೆ.

ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಮಡಿಕೇರಿ, ಡಿ.19 : ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪೌರತ್ವ ನೋಂದಣಿ ಕಾಯ್ದೆಯಿಂದ ರಾಜ್ಯದ ಮುಸ್ಲಿಮರಿಗೆ ತೊಂದರೆಯಾದರೆ ಬೀದಿಗಿಳಿದು ಹೋರಾಟ ಮಾಡಲು ಜಾತ್ಯತೀತ ಜನತಾದಳ (ಜೆಡಿಎಸ್) ಸಿದ್ಧವಿದೆ ಎಂದು ಪಕ್ಷದ ಜಿಲ್ಲಾ ಘಟಕ ಘೋಷಿಸಿದೆ.ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಕಾಯ್ದೆ ಹಾಗೂ ಪೌರತ್ವ ನೋಂದಣಿ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದರು.

ಮೇಲ್ನೋಟಕ್ಕೆ ಈ ಕಾಯ್ದೆಗಳಿಂದ ದೇಶದಲ್ಲಿ ಪ್ರಸಕ್ತ ಇರುವ ಮುಸಲ್ಮಾನರಿಗೆ ಯಾವುದೇ ತೊಂದರೆ ಇರುವುದು ಕಂಡು ಬರುತ್ತಿಲ್ಲ. ಆದರೂ ಕಾಂಗ್ರೆಸ್ ಮತ್ತು ಕೆಲವು ಸಂಘಟನೆಗಳು ದೇಶದ ಮುಸ್ಲಿಮರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿವೆ ಎಂದು ಅವರು ಟೀಕಿಸಿದರು.

ಬಿಜೆಪಿ ರಾಜಕೀಯ ಲಾಭಕ್ಕಾಗಿ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಎಲ್ಲಾ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಆ ಪಕ್ಷ ಕೂಡ ಈ ಕಾಯ್ದೆಗಳ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅವರು ದೂರಿದರು.

(ಮೊದಲ ಪುಟದಿಂದ) ಈ ಕಾಯ್ದೆಗಳಿಂದ ದೇಶದ ಮುಸಲ್ಮಾನರಿಗೆ ಅನ್ಯಾಯವಾ ಗುವುದಿದ್ದಲ್ಲಿ ಜೆಡಿಎಸ್ ಕೂಡಾ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಹೇಳಿದ ಅವರು, ದೇಶದಲ್ಲಿರುವ ಮುಸ್ಲಿಮರು ಕೂಡಾ ಕಾಂಗ್ರೆಸ್ ಹಾಗೂ ಕೆಲವು ಸಂಘಟನೆಗಳ ಪ್ರಚೋದನೆಗಳಿಗೆ ಒಳಗಾಗದೆ ಕಾಯ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಜಾಗೃತರಾಗಿ ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು.

ನಮ್ಮ ಹೋರಾಟಗಳು ಕಾಯ್ದೆಯ ವಿರುದ್ಧ ಇರಬೇಕೇ ಹೊರತು ಯಾವುದೇ ಜಾತಿ, ಧರ್ಮದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೇಂದ್ರ ಸರಕಾರ ಕೂಡ ಪೌರತ್ವ ನೀಡುವಾಗ ಎಲ್ಲರಿಗೂ ನೀಡಬೇಕು. ಇದರಲ್ಲಿ ಅನ್ಯಾಯವಾದಲ್ಲಿ ಜೆಡಿಎಸ್ ಹೋರಾಟ ನಡೆಸಲಿದೆ ಎಂದು ನುಡಿದರು.

ಗೋಷ್ಠಿಯಲ್ಲಿ ಹಾಜರಿದ್ದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ ಮಾತನಾಡಿ, ಕೇಂದ್ರ ಸರಕಾರ ಬ್ರಿಟೀಷರ ಒಡೆದು ಆಳುವ ನೀತಿಯನ್ನು ಮುಂದುವರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ರಾಜ್ಯ ಸರಕಾರ ಕೂಡಾ ಶಾಂತಿಯುತ ಹೋರಾಟ ನಡೆಸುವ ಜನರ ಹಕ್ಕನ್ನು ನಿಷೇಧಾಜ್ಞೆ ಹೇರುವ ಮೂಲಕ ಕಸಿದುಕೊಳ್ಳುತ್ತಿದೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುನಿಲ್, ಖಜಾಂಚಿ ಡೆÉನ್ನಿ ಬರೋಸ್ ಹಾಗೂ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಅಣ್ಣಯ್ಯ ಉಪಸ್ಥಿತರಿದ್ದರು.