ಕೂಡಿಗೆ, ಡಿ. 19: ಅಪರಾಧವನ್ನು ತಡೆಗಟ್ಟಲು ಮತ್ತು ಪತ್ತೆ ಹಚ್ಚಲು ಪೆÇಲೀಸರು ಅಪರಾಧ ನ್ಯಾಯ ವ್ಯವಸ್ಥೆಯ ಒಂದು ಭಾಗವಾಗಿದೆ. ಪೆÇಲೀಸ್ ಕೆಲಸದಲ್ಲಿ ಸಾರ್ವಜನಿಕರು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಪೆÇಲೀಸ್ ಮತ್ತು ಸಮಾಜದಲ್ಲಿ ಶಾಂತಿಯ ದಕ್ಷತೆ ಮತ್ತು ಪರಿಣಾಮಕಾರಿತ್ವವು ಪರಸ್ಪರ ನಂಬಿಕೆ, ಗೌರವ ಮತ್ತು ವಿಶ್ವಾಸವನ್ನು ಅವಲಂಬಿಸಿರುತ್ತದೆ. ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ, ಸಂಚಾರ, ಸಂಘಟಿತ ಅಪರಾಧ, ಸಮಾಜ ವಿರೋಧಿ ಚಟುವಟಿಕೆಗಳು ಮತ್ತು ವಿರೋಧಿ ವಿಷಯಗಳಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಅನುಕೂಲಕರ ಮತ್ತು ಸಾರ್ವಜನಿಕರೊಂದಿಗೆ ಪೊಲೀಸರು ಸ್ನೇಹ, ಗೌರವದಿಂದ ವರ್ತಿಸಬೇಕು ಸಂಬಂಧಕ್ಕಾಗಿ ಉತ್ತಮ ವಾತಾವರಣವನ್ನು ನಿರ್ಮಿಸಲು ಸಹಕಾರವಾಗುತ್ತದೆ ಎಂದು ಸೋಮವಾರಪೇಟೆ ತಾಲೂಕು ಡಿವೈಎಸ್‍ಪಿ ಪಿ.ಕೆ. ಮುರಳೀಧರ್ ಹೇಳಿದರು.

ಪೊಲೀಸ್ ಇಲಾಖೆಯ ವತಿಯಿಂದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಳೂರು ವಿಶ್ವವಿದ್ಯಾನಿಲಯ ಚಿಕ್ಕಅಳುವಾರ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರಪೇಟೆ ತಾಲೂಕಿನ ವಿವಿಧ ಶಾಖೆಗಳ ಪೊಲೀಸರಿಗೆ ನಡೆದ ಒಂದು ದಿನದ ಜನಸ್ನೇಹಿ ಪೊಲೀಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸ್ನೇಹಿ ಪೆÇಲೀಸ್ ಠಾಣೆ ಒಂದು ಸರ್ಕಾರಿ ಉಪಕ್ರಮವಾಗಿದ್ದು, ಇದರ ಅಡಿಯಲ್ಲಿ ಪೆÇಲೀಸ್ ಠಾಣೆಗಳು ರಿಸೆಪ್ಷನ್ ಡೆಸ್ಕ್‍ಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದ್ದು, ಸಾರ್ವಜನಿಕರು ದೂರುಗಳೊಂದಿಗೆ ಪೆÇಲೀಸ್ ಠಾಣೆಗಳಿಗೆ ಭೇಟಿ ನೀಡಿದಾಗ ಅವರ ಕುಂದುಕೊರತೆಗಳನ್ನು ವಿಚಾರಿಸಿ ಗೌರವದಿಂದ ಮತ್ತು ಸೌಜನ್ಯದಿಂದ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ ಎಂದುರು.

ಕಾರ್ಯಕ್ರಮದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್, ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ, ಸೋಮವಾರಪೇಟೆ ಠಾಣಾಧಿಕಾರಿ ಶಿವಶಂಕರ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್, ನಗರ ಪೊಲೀಸ್ ಠಾಣಾಧಿಕಾರಿ ವೆಂಕಟರಾಮನ, ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಅಚ್ಚಮ್ಮ, ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಕೃಷ್ಣನಾಯಕ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ತಿಮ್ಮಪ್ಪ ಸೇರಿದಂತೆ ರಿಸೆಪ್ಷನ್ ಡೆಸ್ಕ್, ನಿಯಂತ್ರಣ ಕೊಠಡಿ (ಸಂವಹನ ಶಾಖೆ), ಪೆಟ್ರೋಲ್ (ಕ್ಷೇತ್ರ ಶಾಖೆ), ದಸ್ತಾವೇಜನ್ನು (ಬರಹಗಾರ ಶಾಖೆ), ಅಪರಾಧ ಶಾಖೆ, ನ್ಯಾಯಾಲಯ ಶಾಖೆ, ಗುಪ್ತಚರ ಶಾಖೆ, ತಂತ್ರಜ್ಞಾನ ಶಾಖೆ, ಬೀಟ್ ಸಿಸ್ಟಮ್, ಪರಿಶೀಲನಾ ಶಾಖೆ, ಸಂಚಾರ ಶಾಖೆ, ವಿಐಪಿ ಭದ್ರತಾ ಶಾಖೆ, ಕಾನೂನು ಮತ್ತು ಸುವ್ಯವಸ್ಥೆ ಶಾಖೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.