*ಗೋಣಿಕೊಪ್ಪಲು, ಡಿ. 19 : ಆರ್ಜಿ, ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಅಂಗನವಾಡಿ ಕೇಂದ್ರಗಳಿಗೆ ಸ್ವಚ್ಚತಾ ಸಾಮಾಗ್ರಿಗಳನ್ನು ಗ್ರಾ.ಪಂ. ವತಿಯಿಂದ ವಿತರಿಸಲಾಯಿತು.

12 ಸಾವಿರ ಮೌಲ್ಯದ ಸ್ವಚ್ಚತಾ ಸಾಮಗ್ರಿಗಳಾದ ಡೆಟಾಯಿಲ್, ಪೆನಾಯಿಲ್, ಬ್ರಶ್ ಸೇರಿದಂತೆ , ವಿವಿಧ ವಸ್ತುಗಳನ್ನು ಆರ್ಜಿ ಗ್ರಾ.ಪಂ. ಅಧ್ಯಕ್ಷೆ ಗಾಯಿತ್ರಿ 5 ಅಂಗನವಾಡಿ ಕೇಂದ್ರಗಳಿಗೆ ಹಾಗೂ ಬೇಟೋಳಿ ಗ್ರಾ.ಪಂ. ಅಧ್ಯಕ್ಷೆ ಚೋಂದಮ್ಮ ಅವರು 6 ಅಂಗನವಾಡಿ ಕೇಂದ್ರಗಳಿಗೆ ನೀಡಿದರು. ಗ್ರಾ.ಪಂ. ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಣಿ ಉಪಸ್ಥಿತರಿದ್ದರು.