ಗೋಣಿಕೊಪ್ಪ ವರದಿ, ಡಿ. 17: ಆರ್ಟ್ ಆಫ್ ಲಿವಿಂಗ್ ಕೊಡಗು ಘಟಕದ ವತಿಯಿಂದ ಇಲ್ಲಿನ ಸೌಖ್ಯ ಹಾಲ್ ಸಭಾಂಗಣದಲ್ಲಿ ಪುತ್ತರಿ ವಿಶೇಷ ಗುರುಪೂಜಾ ಕಾರ್ಯಕ್ರಮ ನಡೆಯಿತು. ರವಿಶಂಕರ್ ಗುರೂಜಿ ಅವರ ಭಾವಚಿತ್ರಕ್ಕೆ ನಮಸ್ಕರಿಸಲಾಯಿತು. ಸದಸ್ಯರು, ಮಕ್ಕಳು ರಂಗೋಲಿ ಬಿಡಿಸಿ ಭಕ್ತಿಗೀತೆ ಹಾಡಿ ಸಂಭ್ರಮಿಸಿದರು. ಶಿಕ್ಷಕರ ಸಮಿತಿ ಅಧ್ಯಕ್ಷ ಅಳಮೇಂಗಡ ಡಾನ್ ರಾಜಪ್ಪ, ಪ್ರಮುಖರಾದ ತಾರಾ, ಟೀನಾ ಮಾಚಯ್ಯ, ಲಕ್ಷ್ಮಿ ರಾಜಪ್ಪ, ಕೃಷಿಕಾ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.