ಸೋಮವಾರಪೇಟೆ, ಡಿ. 17: ಮೀನುಗಾರಿಕಾ ಇಲಾಖೆಯಿಂದ ಉಚಿತವಾಗಿ ನೀಡಲ್ಪಡುವ ಮೀನುಗಾರಿಕಾ ಕಿಟ್‍ಗಳನ್ನು ತಾಲೂಕಿನ 17 ಮಂದಿ ಫಲಾನುಭವಿಗಳಿಗೆ ವಿತರಿಸಲಾಯಿತು.
ಶಾಸಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಶಾಸಕ ಅಪ್ಪಚ್ಚು ರಂಜನ್ ಅವರು, ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು. ಹಾರಂಗಿ ಹಿನ್ನೀರು ಪ್ರದೇಶ, ಸ್ವಂತ ಕೆರೆಗಳಲ್ಲಿ ಮೀನುಗಾರಿಕೆ ಮಾಡುತ್ತಿರುವ ವೃತ್ತಿಪರ ಮೀನುಗಾರರು, ಬಲೆ, ಹಗ್ಗ ಸೇರಿದಂತೆ ಇತರ ಪರಿಕರಗಳನ್ನು ಪಡೆದರು.
ಈ ಸಂದರ್ಭ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಕ್ಷೇತ್ರಪಾಲಕ ರವಿ, ತಾಲೂಕು ಪಂಚಾಯಿತಿ ಸದಸ್ಯ ಧರ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.