ವೀರಾಜಪೇಟೆ, ಡಿ. 17: 2018-19ನೇ ಸಾಲಿನಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಪತ್ತಿಗೆ ತುತ್ತಾದ ಸಂತ್ರಸ್ತರಿಗೆ ಮೈಸೂರು ಧರ್ಮಕ್ಷೇತ್ರ ಮತ್ತು ಓ.ಡಿ.ಪಿ. ಸಂಸ್ಥೆ ನೆರವಾಗಿದೆ.
ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ಕೆ.ಎ. ವಿಲಿಯಂ ಅವರ ನೇತೃತ್ವದಲ್ಲಿ ಈ ನೆರವನ್ನು ನೀಡಲಾಗಿದೆ. ಓ.ಡಿ.ಪಿ.ಯು ನೆರೆ ಸಂತ್ರಸ್ತರಿಗೆ ನೆರವಾಗಲು ವಿಶೇಷ ತಂಡವನ್ನು ರಚಿಸಿ, ಖುದ್ದು ಧರ್ಮಾಧ್ಯಕ್ಷರೇ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ ಬಳಿಕ ಸೂಕ್ತ ಫಲಾನುಭವಿಗಳನ್ನು ಗುರುತಿಸಿ ಸುಸ್ಥಿರ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದ್ದರು. ನಂತರ ಮೈಸೂರು ಧರ್ಮಕ್ಷೇತ್ರದ ವತಿಯಿಂದ ಶಾಲಾ ಅಭಿವೃದ್ಧಿ, ಆಟೋ ಖರೀದಿ, ನಿವೇಶನ ನಕ್ಷೆಯನ್ನು ತಯಾರಿಸಿ ಈ ನಿಧಿಯಿಂದ ಈಗಾಗಲೇ 3.5 ಎಕರೆ ಪ್ರದೇಶವನ್ನು ಸಂತ್ರಸ್ತ ಕುಟುಂಬಗಳ ನಿವೇಶನಕ್ಕಾಗಿ ಗುರುತಿಸಿದ್ದು, ಅಲ್ಲಿ ವಸತಿ ಗೃಹಗಳ ನಿರ್ಮಾಣದ ಅಗತ್ಯ ಸಿದ್ಧತೆಗಳು ಪ್ರಗತಿಯಲ್ಲಿವೆ. ಇದರ ಜೊತೆಗೆ ಜಿಲ್ಲಾದ್ಯಂತ 29 ಮನೆಗಳ ದುರಸ್ತಿ, 3 ಶಾಲೆಗಳ ದುರಸ್ತಿ, 4 ಅಂಗನವಾಡಿಗಳ ದುರಸ್ತಿ, ಮಡಿಕೇರಿಯ ತ್ಯಾಗರಾಜ ಕಾಲೋನಿ ಯಲ್ಲಿ 1 ಹೊಸ ಅಂಗನವಾಡಿ ನಿರ್ಮಾಣ ಮತ್ತು ಚೇರಂಬಾಣೆ ಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಇದರ ಜೊತೆಗೆ ಓ.ಡಿ.ಪಿ. ಸಂಸ್ಥೆಯಿಂದ ರೂ. 3,250 ಮೌಲ್ಯದ 20 ಪೆÇಟ್ಟಣಗಳ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ನೀಡಿದ್ದಾರೆ. ಅದರ ಒಟ್ಟು ಮೌಲ್ಯ ರೂ. 65,000 ಅಲ್ಲದೆ ಮೈಸೂರಿನ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ ಫಲಾನುಭವಿಗಳಿಗೆ ವಿತರಿಸಲಾಯಿತು.