ಸೋಮವಾರಪೇಟೆ, ಡಿ. 17: ರಸ್ತೆಗಳು ನಿರ್ಮಾಣವಾಗುವ ಸಂದರ್ಭ ಚರಂಡಿಗೆ ಸ್ಥಳೀಯರು ಅಗತ್ಯ ಜಾಗ ಒದಗಿಸಿಕೊಡಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮನವಿ ಮಾಡಿದರು.

ಶಾಸಕರ ನಿಧಿಯಿಂದ ರೂ. 10 ಲಕ್ಷ ಅನುದಾನದಡಿ ಕಿಬ್ಬೆಟ್ಟ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಾಂಬರು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಸ್ತೆಯ ಎರಡೂ ಬದಿಯಲ್ಲಿ ಚರಂಡಿಗಳಿದ್ದರೆ ಮಾತ್ರ ರಸ್ತೆ ಬಾಳಿಕೆ ಬರುತ್ತದೆ. ಈ ಹಿನ್ನೆಲೆ ಚರಂಡಿಗೆ ಅಗತ್ಯವಿರುವ ಜಾಗವನ್ನು ಸ್ಥಳೀಯರೇ ಒದಗಿಸಿಕೊಡಬೇಕು ಎಂದರು.

ಶಾಸಕರ ನಿಧಿಯಡಿ ಕಿಬ್ಬೆಟ್ಟ ಗ್ರಾಮದ ಮುಖ್ಯರಸ್ತೆ ದುರಸ್ತಿಗೆ ರೂ. 10 ಲಕ್ಷ ಅನುದಾನ ಒದಗಿಸಿದ್ದು, 500 ಮೀಟರ್ ರಸ್ತೆ ನಿರ್ಮಾಣವಾಗಲಿದೆ. ತೀರಾ ಹಾಳಾಗಿರುವ ಕಡೆಗಳಲ್ಲಿ ನೂತನ ರಸ್ತೆ ನಿರ್ಮಿಸಲು ಕ್ರಮವಹಿಸಬೇಕು. ಗುಣಮಟ್ಟದಲ್ಲಿ ಯಾವದೇ ರಾಜಿ ಮಾಡಿಕೊಳ್ಳಬಾರದು. ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರೇ ಗುಣಮಟ್ಟದ ಬಗ್ಗೆ ಗಮನಹರಿಸಬೇಕು ಎಂದು ರಂಜನ್ ತಿಳಿಸಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ, ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಗ್ರಾ.ಪಂ. ಸದಸ್ಯ ಗಿರೀಶ್, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ್, ಸಿಡಿಪಿಓ ಅಣ್ಣಯ್ಯ, ಅಭಿಯಂತರ ವೀರೇಂದ್ರ, ಗ್ರಾಮದ ಪ್ರಮುಖರಾದ ಕಿಬ್ಬೆಟ್ಟ ಮಧು, ಶೇಷಪ್ಪ, ಗಣೇಶ್,