ಶನಿವಾರಸಂತೆ, ಡಿ. 17: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಕೈಬರಹ ಸ್ಪರ್ಧೆಯಲ್ಲಿ ಶನಿವಾರಸಂತೆ ಸಮೀಪದ ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಕೆ.ಆರ್. ಸನ್ನಿತ್ ಮತ್ತು ರಾಹುಲ್ ಆಂಗ್ಲ ಭಾಷೆ ಕೈಬರಹ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಹಾಗೂ ವಿದ್ಯಾರ್ಥಿನಿ ಎಂ.ಎಂ. ದೀಕ್ಷಿತಾ ಕನ್ನಡ ಭಾಷಾ ಕೈಬರಹದಲ್ಲಿ ತೃತೀಯ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಾರ್ಗದರ್ಶನ ಶಿಕ್ಷಕ ಡಿ.ಪಿ. ಸತೀಶ್, ಎಂ. ಪ್ರಸಾದ್ ಹಾಗೂ ಇತರ ಶಿಕ್ಷಕರು ಹಾಜರಿದ್ದರು.