ನಾಪೆÇೀಕ್ಲು, ಡಿ. 14: ಇಗ್ಗುತ್ತಪ್ಪ ದೇವಡ ಪುತ್ತರಿ ನಮ್ಮೆ, ಪೆÇಯ್ಲೇ..... ಪೆÇಯ್ಲೇ..... ಮಕ್ಕಿ ದೇವಡ ಕೋಲ್ ಕಳಿಂಜ ಪೆÇಯ್ಲೇ..... ಪೆÇಯ್ಲೇ...... ಬಿದ್ದಾಟಂಡ ವಾಡೆಲ್ ಕೋಲ್ ಕಳಿಂಜ ಪೆÇಯ್ಲೇ ಪೆÇಯ್ಲೇ......

ನಾಪೆÇೀಕ್ಲು ಸಮೀಪದ ಬಿದ್ದಾಟಂಡ ವಾಡೆಯ ನೂರಂಬಡ ಮಂದ್‍ನಲ್ಲಿ ಮಂಗಳವಾರ ಸಂಭ್ರಮದ ಹುತ್ತರಿ ಹಬ್ಬದ ಕೋಲಾಟ ನಡೆಯಿತು. ಕೊಡಗಿನ ಸಾಂಪ್ರದಾಯಿಕ ಹುತ್ತರಿ ಕೋಲಾಟಗಳಲ್ಲಿ ಒಂದಾದ ಮಕ್ಕಿ ಶಾಸ್ತಾವು ನಾಡ್ ಮಂದ್ ಕೋಲು ಬಿದ್ದಾಟಂಡ ವಾಡೆಯಲ್ಲಿ ನೂರಂಬಡ ತಕ್ಕ ಮುಖ್ಯಸ್ಥರು ಹಾಗೂ ಊರಿನವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವದರೊಂದಿಗೆ ನೆರವೇರಿತು.

ನಾಪೆÇೀಕ್ಲು ನಾಡಿಗೆ ಸಂಬಂಧಿಸಿದ ಬೇತು, ಕೊಳಕೇರಿ ಹಾಗೂ ನಾಪೆÇೀಕ್ಲು ಗ್ರಾಮಗಳ ತಕ್ಕ ಮುಖ್ಯಸ್ಥರು ಒಟ್ಟಾಗಿ ಸೇರಿ ಕೋಲಾಟ ಸಂಭ್ರಮದಲ್ಲಿ ಪಾಲ್ಗೊಂಡರು. ಶ್ರೀ ಮಹಾದೇವರ ದೇವಸ್ಥಾನ ಮತ್ತು ಶ್ರೀ ಮಹಾ ಗುರು ಪೆÇನ್ನಪ್ಪ ಕೈಮಡ ಸಮೀಪವೇ ಮಂದ್ ಇರುವದು ಹೆಚ್ಚಿನ ಪ್ರಾಮುಖ್ಯತೆಗೆ ಕಾರಣವಾಗಿದೆ

ಹಿಮ್ಮೇಳದ ವಾದ್ಯಕ್ಕೆ ತಕ್ಕಂತೆ ಮಂದ್‍ನ ಮಧ್ಯಭಾಗದಲ್ಲಿರುವ ಬೃಹತ್ ಮರದ ಸುತ್ತ ನಿರ್ಮಿಸಿದ ಕಟ್ಟೆಯ ಸುತ್ತಲೂ ನರ್ತಿಸುತ್ತಾ ಪೆÇಯ್ಲೇ ಪೆÇಯ್ಲೇ ಎಂಬ ಹರ್ಷೋದ್ಘಾರಗಳೊಂದಿಗೆ ಹುತ್ತರಿ ಕೋಲಾಟದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಬೇತು ಗ್ರಾಮದ ಪ್ರಸಿದ್ಧ ಮಕ್ಕಿ ಶಾಸ್ತಾವು ದೇವಾಲಯದಿಂದ ಕೊಂಡೀರ ಕುಟುಂಬದ ಮುಖ್ಯಸ್ಥರು ದೇವರ ಕೋಲು, ಜರಿ ವಸ್ತ್ರ ಹಾಗೂ ಬೆಳ್ಳಿಯ ಕಡತಲೆ (ಖಡ್ಗ) ಸಾಂಪ್ರದಾಯಿಕ ಕಾಪಳ ಕಳಿ (ಕಳಿ ಎಂದರೆ ನೃತ್ಯ, ಇದು ಹುತ್ತರಿ ಹಬ್ಬದಿಂದ ಕೋಲಾಟ ದವರೆಗೆ ಒಂದು ವರ್ಗದ ಜನ ದೇವರ ಹೆಸರಿನಲ್ಲಿ ಆದಿ ಮಾನವರ ವೇಷ ಹಾಕಿಕೊಂಡು ಮನೆ ಮನೆಗೆ ತೆರಳಿ ದಾನ ಧರ್ಮ ಪಡೆದು ಉತ್ಸಾಹದಿಂದ ಕುಣಿದು ಕುಪ್ಪಳಿಸಿ ಸೇರಿದ ಜನರ ಮನ ರಂಜಿಸುವ ಒಂದು ವೇಷ ಹಾಗೂ ನೃತ್ಯ. ಇದನ್ನು ಕಾಪಳ ಕಳಿ ಎಂದು ಕರೆಯಲಾಗುತ್ತಿದೆ) ಕೊಂಬು ಕೊಟ್ಟು ವಾಲಗ, ದುಡಿಕೊಟ್ಟ್ ಪಾಟ್ ನೊಂದಿಗೆ ಬೆಳಿಗ್ಗೆ ಹೊರಡುವದರ ಮೂಲಕ ಹುತ್ತರಿ ಕೋಲಾಟಕ್ಕೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಕುರುಂಬರಾಟ್ ಎಂಬ ತಾಣದಿಂದ ಬೇತು ಗ್ರಾಮದ ಗ್ರಾಮಸ್ಥರು ಮೆರವಣಿಗೆಯಲ್ಲಿ ಬರುತ್ತಿದ್ದಂತೆ ನೂರಂಬಡ ಮಂದ್‍ನಲ್ಲಿ ಬಿದ್ದಾಟಂಡ ಕುಟುಂಬದ ಹಿರಿಯರು ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವದರ ಮೂಲಕ ಬರಮಾಡಿಕೊಂಡರು.

ನೂರಂಬಡ ನಾಡಿಗೆ ಸಂಬಂಧಿಸಿದಂತೆ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದಿಂದ ಹುತ್ತರಿ ಹಬ್ಬಕ್ಕೆ ಚಾಲನೆ ನೀಡಿದಂತೆ ಅತ್ತ ಹಳೆ ತಾಲೂಕಿನ ಭಗವತಿ ದೇವಾಲಯ ಹಾಗೂ ಮೂಟೇರಿಯ ಭಗವತಿ ದೇವಾಲಯದಿಂದಲೂ ಸಾಂಪ್ರದಾಯಿಕ ಹುತ್ತರಿ ಕೋಲಾಟಕ್ಕೆ ಚಾಲನೆ ನೀಡಲಾಯಿತು.

ಅನಂತರ ನಿಗದಿತ ಗ್ರಾಮಗಳಿಂದ ಸಾಂಪ್ರದಾಯಿಕವಾಗಿ ಬಂದು ಸೇರಿದ ಪುರುಷರು ಮಕ್ಕಳಾದಿಯಾಗಿ ಮಂದ್‍ಗೆ ಪ್ರದಕ್ಷಿಣೆ ಬರುತ್ತಾ ಹಿಮ್ಮೇಳದ ವಾದ್ಯಕ್ಕೆ ಸರಿಯಾಗಿ ವಿವಿಧ ನಮೂನೆಯ ಕೋಲಾಟದ ಪ್ರದರ್ಶಿಸಿದರು. ಇದರಲ್ಲಿ ಪರೆಯಕಳಿ, ಕಪ್ಪೆಯಾಟ ಮುಂತಾದ ಸಾಂಪ್ರ ದಾಯಿಕ ಆಚರಣೆಗಳು ನೆರೆದವರ ಗಮನ ಸೆಳೆದವು.

-ಪಿ.ವಿ. ಪ್ರಭಾಕರ್