ಕುಶಾಲನಗರ, ಡಿ. 14: ಬೆಂಗಳೂರಿನಲ್ಲಿ ನಡೆದ ಗೃಹರಕ್ಷಕರ ಕ್ರೀಡೆಯಲ್ಲಿ ಕೊಡಗಿನ ಮಹಿಳೆಯರ ತಂಡ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದೆ.
ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ನಡೆದ ಕ್ರೀಡಾಕೂಟದ ಓಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕುಶಾಲನಗರ ಘಟಕದ ಪಲ್ಲವಿ ತಾಕೇರಿ ಮತ್ತು ಶಿವಮ್ಮ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದರು.
ಇತ್ತೀಚಿಗೆ ಬೆಂಗಳೂರಿನ ಜಯನಗರದ ಅಗ್ನಿಶಾಮಕದ ತರಬೇತಿ ಕೇಂದ್ರ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪಲ್ಲವಿ ತಾಕೇರಿ 100 ಮೀ ಓಟದ ಸ್ಪರ್ಧೆಯಲ್ಲಿ ದ್ವಿತೀಯ, 400 ಮೀ. ಪ್ರಥಮ ಹಾಗೂ 100x4 ರಿಲೇಯಲ್ಲಿ ಪಲ್ಲವಿ ತಾಕೆರಿ, ಶಿವಮ್ಮ, ವೀರಾಜಪೇಟೆಯ ನಸೀಮಾ ಮಡಿಕೇರಿ ಘಟಕದ ಲಕ್ಷ್ಮಿ ತಂಡ ತೃತೀಯ ಸ್ಥಾನ ಪಡೆದಿದೆ.