ಮರಗೋಡು, ಡಿ. 14: ವೈಷ್ಣವಿ ಫುಟ್ಬಾಲ್ ಕ್ಲಬ್ ಮರಗೋಡು ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯುತ್ತಿರುವ ನಾಲ್ಕನೇ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬಲಿಷ್ಠ ನೆಹರು ಎಫ್‍ಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಿನ್ನೆ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆಹರು ತಂಡ ಪೊನ್ನಂಪೇಟೆಯ ಸ್ಕಿಪ್ಪರ್ಸ್ ತಂಡವನ್ನು 5-0 ಗೋಲುಗಳಿಂದ ಮಣಿಸಿತು. ಉಳಿದಂತೆ ಬಿವೈಸಿ ಹಾಲುಗುಂದ ತಂಡ ಎನ್.ವೈಸಿ ಕೊಡಗರ ಹಳ್ಳಿ ತಂಡವನ್ನು 2-0 ಗೋಲುಗಳಿಂದ ಮಣಿಸಿತು.
ನಂತರ ನಡೆದ ಪಂದ್ಯದಲ್ಲಿ ಕೂರ್ಗ್ ಸಾಕರ್ ಕ್ಲಬ್ ತಂಡ ಗನ್ನರ್ಸ್ ಮುತ್ತಾರ್ಮುಡಿ ತಂಡವನ್ನು ಭರ್ಜರಿ 5-1 ಗೋಲುಗಳಿಂದ ಮಣಿಸಿತು. ಇನ್ನೊಂದು ಪಂದ್ಯದಲ್ಲಿ ಯೂನಿವರ್ಸಲ್ ಎಫ್‍ಸಿ ತಂಡಗೌಡ ಫುಟ್ಬಾಲ್ ಅಕಾಡೆಮಿ ತಂಡವನ್ನು 6-5 ಗೋಲುಗಳಿಂದ ಮಣಿಸಿತು. ನಂತರ ನಡೆದ ಪಂದ್ಯದಲ್ಲಿ ಕೆಎಫ್‍ಸಿ ಕುಶಾಲನಗರ ತಂಡರಾಯಲ್ ಕುಕನೂರು ತಂಡವನ್ನು 2-0 ಗೋಲುಗಳಿಂದ ಮಣಿಸಿ ಮುಂದಿನಹಂತಕ್ಕೆ ಲಗ್ಗೆ ಇಟ್ಟಿತು.
ಮತ್ತೊಂದು ಪಂದ್ಯದಲ್ಲಿ ಆತಿಥೇಯ ವೈಷ್ಣವಿ ತಂಡ ಪಿರಿಯಾಪಟ್ಟಣದ ಗೋಲ್ಡನ್ ಸ್ಟ್ರೈಕರ್ಸ್ ತಂಡದ ಎಸುರು 4-0 ಗೋಲುಗಳಿಂದ ಸೋಲುಕಂಡಿತು. ಇನ್ನೊಂದು ಪಂದ್ಯದಲ್ಲಿ ವೈಷ್ಣವಿ ಎಫ್‍ಸಿ ತಂಡ ನೆಹರು ಎಫ್‍ಸಿ ಬಿ ತಂಡವನ್ನು 6-0 ಗೋಲುಗಳಿಂದ ಮಣಿಸಿ ಮುಂದಿನ ಹಂತಕ್ಕೆಲಗ್ಗೆ ಇಟ್ಟಿತು. ಪಂದ್ಯದಲ್ಲಿ ಕಾಫಿ ಲವ್ವರ್ಸ್ ಚೆಟ್ಟಳ್ಳಿ ತಂಡ ಮಡಿಕೇರಿಯ ಸಿಎಫ್‍ಸಿ ತಂಡವನ್ನು 5-4 ಗೋಲುಗಳಿಂದ ಮಣಿಸಿತು.