ಸೋಮವಾರಪೇಟೆ, ಡಿ.14: ಮೊಗೇರ ಸಮಾಜದ ಕುಸುಬೂರು ಗ್ರಾಮ ಶಾಖೆಯ ವತಿಯಿಂದ ತಾ. 17ರಂದು ಕುಸುಬೂರು ಎಸ್ಟೇಟ್‍ನಲ್ಲಿರುವ ಪಾಷಾಣಮೂರ್ತಿ, ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ವಾರ್ಷಿಕ ಮಂಜಪೂಜೆ ಆಯೋಜಿಸಲಾಗಿದೆ ಎಂದು ಗ್ರಾಮ ಶಾಖೆ ಅಧ್ಯಕ್ಷ ಕುಶಾಲಪ್ಪ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 7 ಗಂಟೆಯಿಂದ ವಾರ್ಷಿಕ ವಿಶೇಷ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಕುಶಾಲಪ್ಪ ಮಾಹಿತಿ ನೀಡಿದ್ದಾರೆ.