ಕೂಡಿಗೆ, ಡಿ. 15: ಕೂಡಿಗೆ ಸೈನಿಕ ಶಾಲೆಯ ಸಮೀಪದ ಹಾರಂಗಿ ನದಿ ದಂಡೆಯ ಬಳಿ ಇಂದು 4 ಕಾಡಾನೆಗಳು ಕಂಡು ಬಂದಿದ್ದು, ಈ ಭಾಗದ ಗ್ರಾಮಸ್ಥರು ಭಯಭೀತರಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಅಗಮಿಸಿದ ಸಂದರ್ಭದಲ್ಲಿ 3 ಕಾಡಾನೆಗಳು ಹಾರಂಗಿ

(ಮೊದಲ ಪುಟದಿಂದ) ನದಿಯನ್ನು ದಾಟಿ ಬೆಂಡೆಬೆಟ್ಟದ ಕಡೆಗೆ ಹೋದವು. ಅದರೆ ಒಂದು ಅನೆ ಮಾತ್ರ ನದಿಯನ್ನು ದಾಟದೆ ನದಿಯ ದಂಡೆಯಲ್ಲಿ ಮಲ್ಲೇನಹಳ್ಳಿಯವರೆಗೆ ತೆರಳಿತು. ಅದನ್ನು ಹಿಂಬಾಲಿಸಿ ಅರಣ್ಯ ಇಲಾಖೆ ಪಟಾಕಿ ಸಿಡಿಸಿ ಮಲ್ಲೇನಹಳ್ಳಿ ಹತ್ತಿರ ಹಾರಂಗಿ ನದಿಯನ್ನು ದಾಟಿಸಿ ಬೆಂಡೆಬೆಟ್ಟದ ಕಾಡಿನ ಕಡೆಗೆ ಓಡಿಸಿದರು. ಈ ಸಂದರ್ಭ ಹುದುಗೂರು ಉಪ ವಲಯ ಅರಣ್ಯ ಅಧಿಕಾರಿ ಸತೀಶ್, ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.