ಸಿದ್ದಾಪುರ, ಡಿ. 15: ಹುಲಿ ದಾಳಿಗೆ ಸಿಲುಕಿ ಕರುವೊಂದು ಸಾವನ್ನಪ್ಪಿದ ಘಟನೆ ಸಿದ್ದಾಪುರ ಸಮೀಪದ ಘಟ್ಟದಳ್ಳದಲ್ಲಿ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ಘಟ್ಟದಳ್ಳ ನಿವಾಸಿ ಗೋವಿಂದ ಎಂಬವರ ಮನೆಯ ಮುಂಭಾಗದಲ್ಲಿ ಕಟ್ಟಿಹಾಕಲಾಗಿದ್ದ ಒಂದುವರೆ ವರ್ಷ ಪ್ರಾಯದ ಕರುವಿನ ಮೇಲೆ ಭಾನುವಾರ ಬೆಳಗ್ಗಿನ ಜಾವ ಹುಲಿ ಧಾಳಿ ನಡೆಸಿದೆ. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಹಾಗೂ ಸಿದ್ದಾಪುರ ಪಶುವೈದ್ಯಾಧಿಕಾರಿ ಜಯಕುಮಾರ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.