ನಾಪೋಕ್ಲು, ಡಿ.15: ರಸ್ತೆ ಕಾಮಗಾರಿ ಕೆಲಸಕ್ಕೆ ಬಳಸಲಾಗಿದ್ದ ನೀರಿನ ಟ್ಯಾಂಕರ್ವೊಂದು ಚಾಲಕನ ನಿಯಂತ್ರಣ ತಪ್ಪಿ ಕಾಫಿತೋಟಕ್ಕೆ ಉರುಳಿಬಿದ್ದ ಘಟನೆ ಕೊಟ್ಟಮುಡಿಯಲ್ಲಿ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ನಾಪೋಕ್ಲು-ಬೆಟ್ಟಗೇರಿ-ಮೂರ್ನಾಡು ಕೂಡುರಸ್ತೆ ಬಳಿಯ ಕೊಟ್ಟಮುಡಿಯಲ್ಲಿ ರಸ್ತೆ ಗುಂಡಿಮುಚ್ಚುವ ಕಾಮಗಾರಿ (ಮೊದಲ ಪುಟದಿಂದ) ನಡೆಯುತ್ತಿದ್ದು, ರಸ್ತೆ ಕಾಮಗಾರಿಗೆ ಬಳಸಿಕೊಳ್ಳಲಾಗಿದ್ದ ನೀರಿನ ಟ್ಯಾಂಕರ್ ( ಕೆ.ಎ.07-2669) ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಫಿತೋಟಕ್ಕೆ ಉರುಳಿಬಿದ್ದಿದೆ. ಬಳಿಕ ಜೆಸಿಬಿ ಸಹಾಯದಿಂದ ಟ್ಯಾಂಕರ್ ಅನ್ನು ತೋಟದಿಂದ ಹೊರಕ್ಕೆ ತರಲಾಯಿತು.
- ದುಗ್ಗಳ