ಸುಂಟಿಕೊಪ್ಪ, ಡಿ. 15: ಇಲ್ಲಿನ ವಿಕಾಸ್ ಜನ ಸೇವಾ ಟ್ರಸ್ಟ್ ವತಿಯಿಂದ ಕಳೆದ ಎರಡು ವರ್ಷಗಳಿಂದ ಅನಾಥರಾಗಿ ಎರಡು ಕಣ್ಣುಗಳು ಕಾಣದೆ ಪಾಲಿಬೆಟ್ಟದಲ್ಲಿ ಅಲೆಯುತ್ತಿದ್ದ ಕಮಲಮ್ಮ (65) ಎಂಬ ವೃದ್ದೆಯನ್ನು ಸುಂಟಿಕೊಪ್ಪದ ಜೀವನದಾರಿ ಅನಾಥಾಶ್ರಮದ ಅಧÀ್ಯಕ್ಷ ಹೆಚ್.ಕೆ.ರಮೇಶ್ ಅವರು ರಕ್ಷಿಸಿ ಮಹಿಳೆಗೆ ಆಶ್ರಯ ನೀಡಿದರು. ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ ಸಂದರ್ಭ ಕಣ್ಣಿಗೆ ಪೊರೆ ಬಂದ ಕಾರಣ ಎರಡು ಕಣ್ಣುಗಳು ಕಾಣದಾಗಿದೆ ಎಂದು ವೈದ್ಯರು ತಿಳಿಸಿದ್ದರಿಂದ ಕೂಡಲೆ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಕಿರಣ್ ಭಟ್ಟ್ ಅವರು ಕಮಲಮ್ಮಗೆ ಚಿಕಿತ್ಸೆ ನೀಡಿ ಇದೀಗ ಎರಡು ಕಣ್ಣುಗಳು ಕಾಣುವಂತಾಗಿದೆ. ಈ ಸಂದರ್ಭ ಜೀವನದಾರಿ ಆಶ್ರಮದ ಸಿಬ್ಬಂದಿಗಳಾದ ಅರ್ಚನಾ ಮತ್ತು ರಾಧ ಹಾಜರಿದ್ದರು.