ಚೆಟ್ಟಳ್ಳಿ, ಡಿ. 14: ತಾ. 26, 27 ಹಾಗೂ 28 ರಂದು ನಡೆಯ ಲಿರುವ ದಕ್ಷಿಣ ಭಾರತದ ಇಸ್ಲಾಮಿಕ್ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾ ಕೇಂದ್ರ ಕಾಸರಗೋಡಿನ ಜಾಮಿಅಃ ಸಅದಿಯ್ಯ ಅರಬಿಯ್ಯದ ಸುವರ್ಣ ಮಹೋತ್ಸವ ಸಮಾರಂಭದ ಪ್ರಚಾರ ಸಭೆ ಮಜ್ಲಿಸುಲ್ ಉಲಮಾ ಸಅದಿಯ್ಯೀನ್ ವತಿಯಿಂದ ನೆಲ್ಲಿಹುದಿಕೇರಿ ದಾರುನ್ನಜಾತ್ನಲ್ಲಿ ಇತ್ತೀಚೆಗೆ ನಡೆಯಿತು.
ಸಯ್ಯಿದ್ ತ್ವಾಹಿರ್ ತಂಙಳ್ ಸುಳ್ಯ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದ ಕಾರ್ಯಕ್ರಮವನ್ನು ಶಾದುಲಿ ಫೈಝಿ ಉದ್ಘಾಟಿಸಿದರು. ಆಶೀರ್ವಚನ ನೀಡಿದ ಮಹ್ಮೂದ್ ಉಸ್ತಾದ್ ಎಡಪಲಂ ಅಗಲಿದ ಪಂಡಿತರುಗಳಾದ ತಾಜುಲ್ ಉಲಮಾ, ನೂರುಲ್ ಉಲಮಾರ ಕುರಿತು ಮಾತನಾಡಿದರು.
ಹುಸೈನ್ ಸಅದಿ ಕೆ.ಸಿ. ರೋಡ್ ಮುಖ್ಯಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸಖಾಫಿ ಕೌನ್ಸಿಲ್ ಜಿಲ್ಲಾ ಸಮಿತಿಯ ಸಅದಿಯ್ಯ ಪ್ರಚಾರ ಬ್ಯಾನರ್ ಪ್ರದರ್ಶಿಸಲಾಯಿತು.
ಉಮರ್ ಸಖಾಫಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ, ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಹ್ಮದ್ ಹಾಜಿ ಕುಂಜಿಲ, ಅಬೂಬಕರ್ ಹಾಜಿ ಹಾಕತ್ತೂರು, ಅಲವಿ ಹಾಜಿ ನೆಲ್ಲಿಹುದಿಕೇರಿ, ಜಿಲ್ಲಾ ವಕ್ಫ್ ಅಧ್ಯಕ್ಷ ಕೆ.ಎ. ಯಾಕೂಬ್ ಬಜೆಗುಂಡಿ, ನಿಝಾರ್ ಸಖಾಫಿ, ಮುನೀರ್ ಸಅದಿ, ಶಾಫಿ ಸಅದಿ, ಹಂಝ ಸಅದಿ ಮುಂತಾದವರು ಪಾಲ್ಗೊಂಡಿದ್ದರು.
ಸಂಘದ ಅಧ್ಯಕ್ಷರಾದ ಅಲಿ ಸಅದಿ ಸ್ವಾಗತಿಸಿ, ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಹಫೀಲ್ ಸಅದಿ ನಿರೂಪಿಸಿದರು. ಕಾರ್ಯದರ್ಶಿ ಝುಬೈರ್ ಸಅದಿ ವಂದಿಸಿದರು.