ಶನಿವಾರಸಂತೆ, ಡಿ. 14: ಪಟ್ಟಣದ ಶ್ರೀ ರಾಮಮಂದಿರದಲ್ಲಿ ಸೇವಾ ಸಮಿತಿ ವತಿಯಿಂದ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸಂಜೆ ಶ್ರೀ ರಾಮಮಂದಿರದ ಪ್ರಧಾನ ಅರ್ಚಕ ಪ್ರಸನ್ನಭಟ್ ನೇತೃತ್ವ ದಲ್ಲಿ ಬಾಗೇರಿಯ ಶಂಕರನಾರಾಯಣ ಭಟ್, ಕೆಂಚಮ್ಮನ ಹೊಸಕೋಟೆಯ ರಾಮಸ್ವಾಮಿ ಭಟ್, ಗೋಪಾಲಪುರದ ಮೋಹನ್ ಭಟ್ ಹಾಗೂ ಸುದರ್ಶನ ಭಟ್ ಅವರು ಗಳಿಂದ ಪೂಜಾ ಕೈಂಕರ್ಯಗಳು ಆರಂಭವಾದವು. ಶ್ರೀ ಮಹಾ ಗಣಪತಿ, ಆದಿತ್ಯಾದಿ ನವಗ್ರಹ, ಸೀತಾ, ಲಕ್ಷ್ಮಣ, ಆಂಜನೇಯ ಸಹಿತ ಶ್ರೀ ರಾಮಚಂದ್ರ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಪಂಚಾಮೃತಭಿಷೇಕ, ಪುರುಷ ಸೂಕ್ತ, ನಾರಾಯಣ ಸೂಕ್ತ, ಶ್ರೀಸೂಕ್ತ, ಜಲಾಭಿಷೇಕ, ಅಲಂಕಾರ ಸೇವೆ ನೆರವೇರಿದವು. ರಾತ್ರಿ ಶ್ರೀ ಮಹಾ ಗಣಪತಿ ಹೋಮ, ನವಗ್ರಹ ಹೋಮ, ಶ್ರೀ ರಾಮ ತಾರಕ ಹೋಮ, ಶ್ರೀ ಆಂಜನೇಯ ಸ್ವಾಮಿಗೆ ಫಲ ಹೋಮ ನಡೆಯಿತು. ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಪೂಜಾ ಕಾರ್ಯ ಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂ ಡಿದ್ದರು. ಶ್ರೀ ರಾಮಮಂದಿರ ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.