ಮಡಿಕೇರಿ, ಡಿ. 15: ಕನಿಷ್ಟ ನಗರಸಭೆಯ ಅನುಮತಿಯೂ ಇಲ್ಲದೆ ರಾಜಾರೋಷವಾಗಿ ಕಾನ್ವೆಂಟ್ ಜಂಕ್ಷನ್ ಬಳಿ ಹೋಂ ಸ್ಟೇ ನಡೆಸುತ್ತಿದ್ದ ಮಡಿಕೇರಿ, ಡಿ. 15: ಕನಿಷ್ಟ ನಗರಸಭೆಯ ಅನುಮತಿಯೂ ಇಲ್ಲದೆ ರಾಜಾರೋಷವಾಗಿ ಕಾನ್ವೆಂಟ್ ಜಂಕ್ಷನ್ ಬಳಿ ಹೋಂ ಸ್ಟೇ ನಡೆಸುತ್ತಿದ್ದ ಮನೆಯಲ್ಲಿ ಹಲವು ದಿನದಿಂದ ಸಿನಿಮಾ ಶೂಟಿಂಗ್ ತಂಡವೊಂದು ವಾಸವಿದ್ದರೂ ಯಾವದೇ ದಾಖಲೆ ಇರಿಸಿಲ್ಲ, ಸಿಸಿ ಟಿವಿ ಇಲ್ಲ, ಪೊಲೀಸ್ ಅನುಮತಿ ಇಲ್ಲ, ಪ್ರವಾಸೋದ್ಯಮ ಪರವಾನಗಿಯೂ ಇಲ್ಲ. ಇದೇ ಪ್ರದೇಶದಲ್ಲಿ ಹಲವು ಹೋಂ ಸ್ಟೇಗಳು ಅನಧಿಕೃತವಾಗಿ ನಡೆಯುತ್ತಿದ್ದು; ಮಡಿಕೇರಿಯ ಸುತ್ತಮುತ್ತ ಯಾವದೇ ಎಗ್ಗಿಲ್ಲದೆ ಪ್ರವಾಸಿಗರನ್ನು ಇರಿಸಿಕೊಳ್ಳಲಾಗುತ್ತಿದೆ.
ಸಾರ್ವಜನಿಕರ ದೂರಿನ ಆಧಾರದಲ್ಲಿ ನಿನ್ನೆ ದಿನ ನಗರ ಠಾಣಾಧಿಕಾರಿಯ ನೇತೃತ್ವದಲ್ಲಿ ಹೋಂ ಸ್ಟೇ ಅಸೋಸಿಯೇಷನ್ ಪದಾಧಿಕಾರಿ ಗಳೊಂದಿಗೆ
(ಮೊದಲ ಪುಟದಿಂದ) ಸ್ಥಳ ಪರಿಶೀಲನೆ ನಡೆಸಲಾಗಿತ್ತು. ಇಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ, ಎಸ್.ವಿ. ಸದಾಶಿವ್, ಎಎಸ್‍ಐ ಗೋವಿಂದರಾಜು ಹಾಗೂ ಸಿಬ್ಬಂದಿ ದಾಳಿ ನಡೆಸಿದರು.ಯಾವದೇ ದಾಖಲೆಗಳಿಲ್ಲದೆ ಅತಿಥಿಗಳನ್ನು ಇರಿಸಿಕೊಂಡಿದ್ದುದನ್ನು ಗಮನಿಸಿದ ಅಧಿಕಾರಿಗಳು ಎಚ್ಚರಿಸಿದರು. ಯಾವದೇ ದಾಖಲೆಯಿಲ್ಲದೆ; ಮೂರನೇ ವ್ಯಕ್ತಿ ವ್ಯವಹಾರ ಮಾಡುತ್ತಿದ್ದುದು ಗಮನಕ್ಕೆ ಬಂದಿತು. ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸ್ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪೂರ್ಣ ದಾಖಲೆ ತಯಾರಾಗುವವರೆಗೆ ವ್ಯವಹಾರ ಮಾಡದಂತೆ ಎಚ್ಚರಿಸಿ ಮರಳಿದ್ದಾರೆ.
ದಾಳಿಯ ಬಳಿಕ ಮಾತನಾಡಿದ ರಾಘವೇಂದ್ರ ಅವರು ಅನಧಿಕೃತ ಹೋಂ ಸ್ಟೇಗಳ ವಿರುದ್ಧ ದಾಳಿ ಮುಂದುವರೆಸುವದಾಗಿ ಹೇಳಿದರು. ಕೂಡಲೇ ಎಲ್ಲರೂ ದಾಖಲೆಗಳನ್ನು ಪ್ರದರ್ಶಿಸಬೇಕು, ನೋಂದಣೆ ಇಲ್ಲದಿದ್ದರೆ ಮುಚ್ಚಬೇಕು ಎಂದು ಕಟ್ಟುನಿಟ್ಟಿನ ಹೇಳಿಕೆ ನೀಡಿದ್ದಾರೆ. ಎಸ್‍ಐ ಸದಾಶಿವ ಅವರು ಮಾತನಾಡಿ, ಅನಧಿಕೃತ ಹೋಂ ಸ್ಟೇಗಳ ವಿವರವನ್ನು ಸಾರ್ವಜನಿಕರು ನೀಡುವಂತೆ ಹೇಳಿದ್ದಾರೆ.
ಈ ಕುರಿತು ಹೋಂ ಸ್ಟೇ ಅಧ್ಯಕ್ಷ ಬಿ.ಜಿ. ಅನಂತಶಯನ, ಮಾಜಿ ಅಧ್ಯಕ್ಷ ಕೆ.ಎಂ. ಕರುಂಬಯ್ಯ, ಸಹ ಕಾರ್ಯದರ್ಶಿ ನವೀನ್, ಸಮಿತಿ ಸದಸ್ಯೆ ಮೋಂತಿ ಗಣೇಶ್ ಜಂಟಿ ಹೇಳಿಕೆ ನೀಡಿದ್ದು; ವ್ಯಾಪಾರ ಮಾಡುವ ಹಕ್ಕು ಎಲ್ಲರಿಗೂ ಇದ್ದು, ಕಾನೂನಿನ ಚೌಕಟ್ಟಿನೊಳಗೆ ಮಾಡುವಂತೆ ಹೇಳಿದ್ದಾರೆ. ಅನಧಿಕೃತ ಹೋಂ ಸ್ಟೇ ನಡೆಸಲು ಮಾಲೀಕರು ದೂರ ಇದ್ದುಕೊಂಡು ಪ್ರೋತ್ಸಾಹಿಸುವದು ಮೊದಲ ತಪ್ಪು ಎಂದಿರುವ ಅವರು, ಕೂಡಲೇ ಎಲ್ಲರೂ ನೋಂದಾವಣೆಗೆ ಮುಂದಾಗಲು ಕೋರಿದ್ದಾರೆ.