ಮಡಿಕೇರಿ, ಡಿ. 15: ಜಗತ್ತು ಅನಾಗರಿಕ ಸ್ಥಿತಿಯಲ್ಲಿದ್ದಾಗಲೇ ಭಾರತ ಜಗತ್ತಿಗೆ ರಾಮಾಯಣ ಮಹಾಭಾರತ ವೇದ ಉಪನಿಷತ್ತುಗಳನ್ನು ನೀಡಿದ ಖ್ಯಾತಿಯನ್ನು ಹೊಂದಿತ್ತು ಎಂದು ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂಧನ್ ಭಟ್ ಹೇಳಿದರು.ಭಾನುವಾರದಂದು ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಆವರಣದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ ಮತ್ತು ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಏರ್ಪಡಿಸ ಲಾಗಿದ್ದ ಚಿತ್ರ ಕಲೆ ಸ್ಪರ್ಧೆ ಮತ್ತು ಬಹುಭಾಷೆ ಕವಿಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ಸಾಹಿತ್ಯಕ್ಕೆ ಮೀಸಲಾಗಿರುವ ಅನೇಕ ಸಂಘ ಸಂಸ್ಥೆಗಳು ಆಯಾ ಭಾಗದಲ್ಲಿ ನೆಲೆಸಿದ್ದರೂ, ಇನ್ನೊಂದು ಸಂಘಟನೆ ಯಾಕೆ ಬೇಕು ಎಂಬ ಪ್ರಶ್ನೆ ಎಲ್ಲರಲ್ಲಿದೆ, ಆದರೆ, ಯಾವುದೇ ಸಂಘಟನೆ ಭಾರತ ಮತ್ತು ಭಾರತೀಯ ಎಂಬ ಪದವನ್ನು ಒಳಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ ದೇಶ ವ್ಯಾಪ್ತಿ ಮನೆ ಮನಗಳನ್ನು ಮಟ್ಟುವ ಕೆಲಸ ಮಾಡುತ್ತಿದ್ದು, ಕಳೆದ 55 ವರ್ಷದಿಂದ ಕಾರ್ಯನಿರತವಾಗಿದೆ ಎಂದು ತಿಳಿಸಿದರು.ಕೊಡಗಿನಲ್ಲಿ ಪರಿಷತ್ ಎರಡು ವರ್ಷಗಳಿಂದ (ಮೊದಲ ಪುಟದಿಂದ) ಉತ್ತಮ ಕೆಲಸಮಾಡಿದ್ದು, ಸಾಹಿತ್ಯದಿಂದ ಬಂದುತ್ವವನ್ನು ವಿಸ್ತರಣೆ ಮಾಡುವ ಕೆಲಸವಾಗಬೇಕು, ಆದರೆ ಸಾಮಾಜವನ್ನು ಭಾಷೆ, ಜಾತಿ ಹಿನ್ನೆಲೆಯಲ್ಲಿ ಒಡೆಯುವ ಕೆಲಸವಾಗುತ್ತಿದೆ ಎಂದು ವಿಷಾದಿಸಿದರು.ಸಮಾರೋಪ ಭಾಷಣ ಮಾಡಿದ ಅಖಿಲ ಭಾರತ ಸಾಹಿತ್ಯ ಪರಿಷತ್‍ನ ರಾಜ್ಯ ಸಂಚಾಲಕ ನಾರಾಯಣ ಶೆವಿರೆ ‘ಸಮಾಜಕ್ಕೆ ಒಳಿತನ್ನು ಬಯಸಿ ಬಾಳಬೇಕು, ನಮ್ಮಷ್ಟಕ್ಕೆ ನಾವೇ ಒಳ್ಳೆಯವರಾಗಿ ಬದುಕಿದರೆ ಅದು, ಸ್ವಾರ್ಥ ಬದುಕಾಗುತ್ತದೆ ಎಂದು ವಿಶ್ಲೇಷಿಸಿದ ಅವರು, ಸಾಹಿತ್ಯ ಬದುಕಿನ ಕನ್ನಡಿ, ಸಮಾಜದಲ್ಲಿನ ಆಗು - ಹೋಗು, ಲೋಪ ದೋಷ ಮರುಕಳಿಸದಂತೆ ತಿದ್ದಿಕೊಳ್ಳಲು ಸಾಹಿತ್ಯ ಬೇಕು ಎಂದು ಪ್ರತಿಪಾದಿಸಿದರು.

ನೂತನ ಪದಾಧಿಕಾರಿಗಳ ಘೋಷಣೆ

ಮಡಿಕೇರಿ ನಗರ ಅಧ್ಯಕ್ಷರಾಗಿ ಕೋರನ ಸುನಿಲ್, ಜಿಲ್ಲಾಧಕ್ಷರಾಗಿ ಕಿಗ್ಗಾಲು ಗಿರೀಶ್, ಜಿಲ್ಲಾ ಕಾರ್ಯದರ್ಶಿಯಾಗಿ ಬಬ್ಬಿರ ಸರಸ್ವತಿ, ಜಿಲ್ಲಾ ಉಪ ಕಾರ್ಯದರ್ಶಿಯಾಗಿ ಪ್ರಸನ್ನ ಕುಮಾರ್ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಘುನಂಧನ್ ಭಟ್ಟ ಘೋಷಣೆ ಮಾಡಿದರು.

ಪೂರ್ವಾಹ್ನ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಕ್ಕಳ ತಜ್ಞ ಪ್ರಜಾಸತ್ಯ ಪತ್ರಿಕೆಯ ಸಂಪಾದಕರಾದ ಡಾ. ಬಿ.ಸಿ. ನವೀನ್ ಕುಮಾರ್ ಅವರು ಕಲೆ ಮತ್ತು ಸಾಹಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕಾದರೆ ಮಕ್ಕಳಲ್ಲಿ ಪುಸ್ತಕ ಓದುವ ಗ್ರಂಥಾಲಯ ಪ್ರೀತಿಯನ್ನು ಬೆಳೆಸುವ ಪ್ರಯತ್ನವನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕು ಎಂದು ಕರೆ ನೀಡಿದರು.

ಮುಖ್ಯ ಅಥಿತಿಯಾಗಿ ಹಿರಿಯ ವೈದ್ಯರಾದ ಡಾ. ಎಂ.ಜಿ. ಪಾಟ್ಕರ್, ಅರುಣ್ ಸ್ಟೋರ್ ಮಾಲೀಕ ಅರುಣ್ ಪಾಲ್ಗೊಂಡಿದ್ದರು. ಚಿತ್ರಕಲೆ ಸ್ಪÀರ್ಧೆಯ ನಂತರ ಬಹುಭಾಷಾ ಕವಿಗೋಷ್ಠಿಯಲ್ಲಿ ಕಸ್ತೂರಿ ಗೋವಿಂದಮಯ್ಯ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಂಚಾಲಕ ಎಂ.ಪಿ. ಜಯಕುಮಾರ್ ಮತ್ತು ಸಚಿನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿವಿಧ ವಯೋಮಾನದ ಮಕ್ಕಳಿಗೆ ಏರ್ಪಡಿಸಲಾಗಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಮೂರು ಬಹುಮಾನದೊಂದಿಗೆ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಅಧಿಕ ಸಂಖ್ಯೆಯಲ್ಲಿ ಮಕ್ಕಳು ಪೋಷಕರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಚಿತ್ರ ಕಲಾವಿದ ಮತ್ತು ಶಿಕ್ಷಕರಾದ ಪ್ರಸನ್ನ ಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.