ನಾಪೋಕ್ಲು, ಡಿ.13: ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಹುತ್ತರಿ ಬೊಳ್ಳಾಟಂ ತಾ. 15ರಂದು ಸಂಜೆ 6.30ಗಂಟೆಗೆ ನಡೆಯಲಿದೆ ಎಂದು ಪೊನ್ನುಮುತ್ತಪ್ಪ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ. ಪ್ರತಿ ಶನಿವಾರ ಸಂಜೆ 5.30 ಗಂಟೆಗೆ ಪೈಂಗುತ್ತಿ ನಡೆಯಲಿದೆ ಹಾಗೂ ಪ್ರತಿ ತಿಂಗಳು 15ನೇ ತಾರೀಖಿನಂದು ಸಂಜೆ 6.30ಗಂಟೆಗೆ ಬೊಳ್ಳಾಟಂ ನಡೆಯುತ್ತದೆ. ಭಕ್ತರು ಹರಕೆ ಪೈಂಗುತ್ತಿ ಹಾಗೂ ಹರಕೆ ಬೊಳ್ಳಾಟಂ ಸಲ್ಲಿಸಬಹುದಾಗಿದೆ ಎಂದು ದೇವಾಲಯದ ಪ್ರಕಟಣೆ ಕೋರಿದೆ.