ಮಡಿಕೇರಿ, ಡಿ. 13: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಮೂವರು ಸದಸ್ಯರನ್ನು ಹಾಲಿ ಇರುವ ಆಡಳಿತ ಮಂಡಳಿಯ ಮೂಲಕ ನಾಮನಿರ್ದೇಶಿತರನ್ನಾಗಿ ಆಯ್ಕೆ ಮಾಡಲಾಗಿದೆ.
ಮಡಿಕೇರಿ ತಾಲೂಕಿನಿಂದ ಕುಡಿಯರ ಮುತ್ತಪ್ಪ, ವೀರಾಜಪೇಟೆಯಿಂದ ಮುಲ್ಲೇಂಗಡ ರೇವತಿ ಪೂವಯ್ಯ ಹಾಗೂ ಸೋಮವಾರಪೇಟೆ ತಾಲೂಕಿನಿಂದ ತೇಲಪಂಡ ಕವನ್ ಕಾರ್ಯಪ್ಪ ಅವರನ್ನು ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.