ಚೆಟ್ಟಳ್ಳಿ, ಡಿ. 13: ನಾಪೋಕ್ಲುವಿನ ಪ್ರಸಿದ್ಧ ನೂರೊಂಬಲ ನಾಡು ಮಕ್ಕಿ ಶಾಸ್ತವು ನಾಡು ಮಂದ್ ಹುತ್ತರಿ ಕೋಲು ತಾ. 14, 15 ರಂದು ಬಿದ್ದಾಟಂಡ ವಾಡೆಯಲ್ಲಿ ನಡೆಯಲಿದೆ ಎಂದು ಊರಿನ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.

ಪದ್ಧತಿಯಂತೆ ತಾ. 14 ರಂದು (ಇಂದು) ಬೆಳಿಗ್ಗೆ ನಾಪೋಕ್ಲು ಬೇತು ಗ್ರಾಮದ ಮಕ್ಕಿ ಶಾಸ್ತವು ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಊರಿನವರು ಮತ್ತು ತಕ್ಕ ಮುಖ್ಯಸ್ಥರು ಸೇರಿ ತಿರುವಾಯಿದಾ ವಾದ್ಯದೊಂದಿಗೆ ಕಾಪಳ ಕಳಿ ಜೊತೆಗೂಡಿ ಮೆರವಣಿಗೆಯೊಂದಿಗೆ ಬಿದ್ದಾಟಂಡ ವಾಡೆಗೆ ಸಾಗುವರು. ಮಧ್ಯಾಹ್ನ 2 ಗಂಟೆಗೆ ದೊಡ್ಡ ಕೋಲಾಟ ನಡೆಯಲಿದೆ. ತಾ. 15 ರಂದು ಮಧ್ಯಾಹ್ನ 2 ಗಂಟೆಗೆ ಸಣ್ಣ ಕೋಲು ನಡೆಯಲಿದೆ.