ಗೋಣಿಕೊಪ್ಪಲು, ಡಿ. 13: ಯುವ ಸದಸ್ಯರೊಂದಿಗೆ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯು ಮತ್ತಷ್ಟು ಪ್ರಭಲವಾಗಿ ಬೆಳೆಯ ಬೇಕಾಗಿದ್ದು, ಈ ನಿಟ್ಟಿನಲ್ಲಿ ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸದಸ್ಯತ್ವ ಪಡೆದುಕೊಳ್ಳು ವಂತಾಗಬೇಕೆಂದು ರೋಟರಿ ಜಿಲ್ಲೆ 3181ನÀ ಗವರ್ನರ್ ಜೋಸೆಫ್ ಮ್ಯಾಥ್ಯು ಕರೆ ನೀಡಿದ್ದಾರೆ.
ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ರೋಟರಿ ಸಂಸ್ಥೆಗೆ ಭೇಟಿ ನೀಡಿದ ಜಿಲ್ಲಾ ಗವರ್ನರ್ ಸಾರ್ವಜನಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೋಟರಿ ವಿದ್ಯಾರ್ಥಿ ಘಟಕವಾಗಿರುವ ರೋಟರ್ಯಾಕ್ಟ್ ಸದಸ್ಯರೂ ಮುಂದಿನ ದಿನಗಳಲ್ಲಿ ರೋಟರಿ ಸದಸ್ಯರಾಗಲು ದೊರಕಿದ್ದು ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು. ಜಗತ್ತಿನಲ್ಲಿಯೇ ರೋಟರಿ ಆರ್ಥಿಕ ವಹಿವಾಟು ಪಾರದರ್ಶಕ ವಹಿವಾಟಾಗಿ ಗುರುತಿಸಲ್ಪಟ್ಟಿದ್ದು, ಹೀಗಾಗಿಯೇ ಕಳಂಕರಹಿತವಾಗಿ ಜಗತ್ತಿನಾದ್ಯಂತ ರೋಟರಿ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳು ವಂತಾಗಿದೆ ಎಂದು ಜೋಸೆಫ್ ಮ್ಯಾಥ್ಯು ಹೇಳಿದರು. ರೋಟರಿ ಸಂಸ್ಥೆಗೆ ಪ್ರತಿಯೋರ್ವರು ನೀಡುವ ಹಣ ಜಗತ್ತಿನ ಎಲ್ಲಿಯೂ ಇರುವ ಆರ್ಥಿಕ ಅಗತ್ಯವುಳ್ಳವನಿಗೆ ಸೇರುತ್ತದೆ. ಹೀಗಾಗಿಯೇ ರೋಟರಿಗೆ ಆರ್ಥಿಕ ನೆರವು ನೀಡಲು ಯಾರೂ ಹಿಂಜರಿಯುವುದಿಲ್ಲ ಎಂದೂ ಜೋಸೆಫ್ ಮ್ಯಾಥ್ಯು ಹೇಳಿದರು.
ರೋಟರಿ ವಲಯ 6ರ ಸಹಾಯಕ ಗವರ್ನರ್ ಪಿ. ನಾಗೇಶ್ ಮಾತನಾಡಿ, ಜೀವನ್ ಸಂದ್ಯಾ ಮತ್ತು ಸೇವ್ ಎ ಲೈಫ್ ಎಂಬ ಯೋಜನೆಗಳ ಮೂಲಕ ಕಳೆದ 6 ತಿಂಗಳಿನಿಂದ ರೋಟರಿ ಸದಸ್ಯರು ಹಿರಿಯ ನಾಗರಿಕರು ಮತ್ತು ಗಾಯಾಳುಗಳಿಗೆ ಸೂಕ್ತ ನೆರವಿನ ಯೋಜನೆ ಕಾರ್ಯಗತಗೊಳಿಸುತ್ತಿರುವುದಾಗಿ ತಿಳಿಸಿದರು. ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಮಾತನಾಡಿ, ತೋರಾ ಗ್ರಾಮದಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತ ಕೀತಿಯಂಡ ಬೆಳ್ಯಪ್ಪ ಅವರ ಮನೆಗೆ ಗೋಣಿಕೊಪ್ಪಲು ರೋಟರಿ ಮೂಲಕ 5 ಸೋಲಾರ್ ದೀಪಗಳು ದೊರಕಿದ್ದು, ಕತ್ತಲಲ್ಲಿದ್ದ ಮನೆಮಂದಿಗೆ ಬೆಳಕು ನೀಡಿದ ಕೀರ್ತಿ ರೋಟರಿ ಸದಸ್ಯರದ್ದು ಎಂದು ಶ್ಲಾಘಿಸಿದರು. ದೆಹಲಿಯ ಸಂಸ್ಥೆಯೊಂದು ನೀಡಿದ್ದ 3500 ಇಂಗ್ಲೀಷ್ ಪುಸ್ತಕಗಳನ್ನು ವಿವಿಧ ರೋಟರಿ ಕ್ಲಬ್‍ಗಳ ಮೂಲಕ 35 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸುವಲ್ಲಿ ಗೋಣಿಕೊಪ್ಪ ರೋಟರಿಯ ಪಾತ್ರ ಮಹತ್ವದ್ದು ಎಂದೂ ಹೆಮ್ಮೆ ವ್ಯಕ್ತಪಡಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಕಾಡ್ಯಮಾಡ ನವೀನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜೋನಲ್ ಲೆಫ್ಟಿನೆಂಟ್ ಡಾ. ಡಾ. ಎಸ್.ವಿ. ನರಸಿಂಹನ್, ಕಾರ್ಯದರ್ಶಿ ಪೂಣಚ್ಚ, ಮುಂದಿನ ಸಾಲಿನ ಅಧ್ಯಕ್ಷೆ ಬೀಟಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಪೂಣಚ್ಚ ಸ್ವಾಗತಿಸಿ ದರು, ಮೂಕಳೇರ ಬೀಟಾ ವಂದಿಸಿ ದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ರಂಗ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಅನಿತಾ ಕಾರ್ಯಪ್ಪ ಸೇರಿದಂತೆ ವಲಯ 6ರ ನೂರಾರು ರೋಟರಿ ಸದಸ್ಯರು ಪಾಲ್ಗೊಂಡಿದ್ದರು.
ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಅಧಿಕೃತ ಭೇಟಿ ಹಿನ್ನೆಲೆ ಮುಂಜಾನೆ ದೇವರಪುರದ ಅಮೃತವಾಣಿ ಶಾಲೆಯ ವಿಶೇಷಚೇತನ ಮಕ್ಕಳ ಆರೋಗ್ಯ ಕ್ಷೇಮ ವಿಚಾರಿಸಿ ಮಕ್ಕಳ ಅನುಕೂಲಕ್ಕಾಗಿ ಧ್ವನಿವರ್ಧಕ ವಿತರಿಸಿದರು. ನಂತರ ಗೋಣಿಕೊಪ್ಪಲುವಿನ ಸೆಂಥೋಮಸ್ ಶಾಲೆಯಲ್ಲಿ ವೀರಾಜಪೇಟೆಯ ದಂತ ವೈದ್ಯಕೀಯ ಕಾಲೇಜಿನ ಸಹಯೋಗ ದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು. ಕೈಕೇರಿ ರೋಟರಿ ಸಮುದಾಯ ಭವನದಲ್ಲಿ ರೋಟರಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಯಕ್ರಮ ವಿವರ ಪಡೆದರು. ಈ ಸಂದರ್ಭ ರೊಟೇರಿಯನ್ ಪ್ರಮೋದ್ ಕಾಮತ್, ಚೇಂದೀರ ಸುಮಿ ಸುಬ್ಬಯ್ಯ, ಡಾ. ಚಂದ್ರಶೇಖರ್, ಅಜ್ಜಿಕುಟ್ಟಿರ ಸಜನ್, ಎಂ.ಜಿ. ಮೋಹನ್, ದಿಲನ್ ಚಂಗಪ್ಪ ಮುಂತಾದವರು ಹಾಜರಿದ್ದರು.