*ಗೋಣಿಕೊಪ್ಪಲು, ಡಿ. 13: ತಿತಿಮತಿ ಗ್ರಾಮ ಪಂಚಾಯಿತಿ 2ನೇ ಹಂತದ 3ನೇ ವಾರ್ಡ್ ಸಭೆಯು ತಾ. 16ರಂದು ಬೆಳಿಗ್ಗೆ 10 ಗಂಟೆಗೆ ಬೊಂಬುಕಾಡ್ ಅಂಗನವಾಡಿಯಲ್ಲಿ, 4ನೇ ವಾರ್ಡ್ ಸಭೆ ತಾ.16ರಂದು ಮಧ್ಯಾಹ್ನ 2 ಗಂಟೆಗೆ ಮರೂರು ಅಂಗನವಾಡಿಯಲ್ಲಿ, 2ನೇ ವಾರ್ಡ್ ಸಭೆ ತಾ.17ರಂದು ಬೆಳಿಗ್ಗೆ 10 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ, 5ನೇ ವಾರ್ಡ್ ಸಭೆ ತಾ.17ರಂದು ಮಧ್ಯಾಹ್ನ 2 ಗಂಟೆಗೆ ರೇಷ್ಮೆ ಹಡ್ಲು ಸಮುದಾಯ ಭವನದಲ್ಲಿÀ, 1ನೇ ವಾರ್ಡ್ ಸಭೆಯು ತಾ.18ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪ ಬಸವೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.

ಎರಡನೇ ಹಂತದ ಗ್ರಾಮಸಭೆಯು ತಾ.23ರಂದು ತಿತಿಮತಿ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಿತಿಮತಿ ಸಮುದಾಯ ಭವನದಲ್ಲಿ ನಡೆಯಲಿದೆ.