ಮಡಿಕೇರಿ, ಡಿ. 13: ಕೊಟ್ಟೂರು ಚೇರಂಬಾಣೆಯ ಶ್ರೀ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ನಾಟೋಳಂಡ ಚೋಂದಮ್ಮ ದೇವಯ್ಯ ಸ್ಮರಣಾರ್ಥವಾಗಿ ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮೂರನೇ ವರ್ಷದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು.
ಶ್ರೀ ರಾಜ ರಾಜೇಶ್ವರಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ರಾಮಮೂರ್ತಿ ಉದ್ಘಾಟಿಸಿದರು. ಶಟಲ್ ಬ್ಯಾಡ್ಮಿಂಟನ್ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಕುಶಾಲನಗರದ ಫಾತಿಮಾ ಕಾನ್ವೆಂಟ್ ಶಾಲೆಯ ಹರ್ಷ ಪ್ರಥಮ, ಶಾಂತಿನಿಕೇತನ ಶಾಲೆಯ ಪೃಥ್ವಿನ್ ದ್ವಿತೀಯ ಹಾಗೂ ಫಾತಿಮಾ ಕಾನ್ವೆಂಟ್ ಶಾಲೆಯ ಗೌತಮ್ ತೃತೀಯ ಸ್ಥಾನ ಪಡೆದು ಕೊಂಡರು. ಬಾಲಕಿಯರ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ಸ್ಪರ್ಧಿ ನಿಲೀಷ ಪ್ರಥಮ, ಭಾರತೀಯ ವಿದ್ಯಾಭವನ ಶಾಲೆಯ ತ್ರಿಷ ದ್ವಿತೀಯ ಹಾಗೂ ಶ್ರೀ ರಾಜ ರಾಜೇಶ್ವರಿ ಚೇರಂಬಾಣೆಯ ಆಯಿಷ ತೃತೀಯ ಸ್ಥಾನ ಪಡೆದುಕೊಂಡರು.
ಬಾಲಕರ ಡಬಲ್ಸ್ ವಿಭಾಗದಲ್ಲಿ ಕುಶಾಲನಗರದ ಫಾತಿಮಾ ಕಾನ್ವೆಂಟ್ ಶಾಲೆ ಪ್ರಥಮ, ಭಾರತೀಯ ವಿದ್ಯಾಭವನ ಶಾಲೆ ದ್ವಿತೀಯ ಹಾಗೂ ಶಾಂತಿನಿಕೇತನ ಶಾಲೆ ತೃತೀಯ ಸ್ಥಾನ ಪಡೆದುಕೊಂಡರೆ, ಬಾಲಕಿಯರ ವಿಭಾಗದಲ್ಲಿ ಶ್ರೀ ರಾಜ ರಾಜೇಶ್ವರಿ ಚೇರಂಬಾಣೆ ಪ್ರಥಮ, ಸೈಂಟ್ ಜೋಸೆಫ್ ಮಡಿಕೇರಿ ಶಾಲೆ ದ್ವಿತೀಯ ಸ್ಥಾನ ಹಾಗೂ ಭಾರತೀಯ ವಿದ್ಯಾಭವನ ಮಡಿಕೇರಿ ತೃತೀಯ ಸ್ಥಾನ ಪಡೆದುಕೊಂಡಿತು. ಅತ್ಯುತ್ತಮ ಉದಯೋನ್ಮುಖ ಆಟಗಾರರಾಗಿ ಶಾಂತಿನಿಕೇತನ ಶಾಲೆಯ ಪೃಥ್ವಿನ್ ಹಾಗೂ ಶ್ರೀ ರಾಜ ರಾಜೇಶ್ವರಿ ಚೇರಂ ಬಾಣೆಯ ಆಯಿಷ ಬಹುಮಾನ ಸ್ವೀಕರಿಸಿದರು. ಮುಖ್ಯ ಅತಿಥಿಗಳಾಗಿ ಮೇಲಾಟಂಡ ಅರುಣ್ ಉತ್ತಪ್ಪ, ನಾಟೋಳಂಡ ಜಯ, ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಾಟೋಳಂಡ ವಿಜು, ಸಂಸ್ಥೆಯ ಮುಖ್ಯ ಶಿಕ್ಷಕರಾದ ರಾಮುಮೂರ್ತಿ, ಕೃಷ್ಣ ಹಾಗೂ ಕಿಶೋರ್ ಹಾಜರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.