ಸೋಮವಾರಪೇಟೆ, ಡಿ. 12: ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಶಾಲಾ ಸಭಾಂಗಣದಲ್ಲಿ ನಡೆದ ವಿದ್ಯಾಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಾಲಿಗೆ ಅಧ್ಯಕ್ಷರು ಸೇರಿದಂತೆ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಯಿತು. ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಕೆ.ಕೆ. ಗೋಪಾಲ್, ಕಾರ್ಯದರ್ಶಿಯಾಗಿ ಜಿ.ಡಿ. ಕಾರ್ಯಪ್ಪ, ಬಾತ್ಮೀದಾರರಾಗಿ ಎಂ.ಆರ್. ಸಂಪತ್‍ಕುಮಾರ್, ಖಜಾಂಚಿಯಾಗಿ ಕೆ.ಯು. ವೀರಪ್ಪ ಅವರುಗಳನ್ನು ನೇಮಿಸಲಾಯಿತು.
ಆಡಳಿತ ಮಂಡಳಿ ನಿರ್ದೇಶಕರುಗಳಾಗಿ ಕೆ.ಕೆ. ಸುಬ್ಬಯ್ಯ, ಬಿ.ಈ. ಜಯೇಂದ್ರ, ಟಿ.ಪಿ. ಚಂಗಪ್ಪ, ಜಿ.ಎಸ್. ಉದಯಕುಮಾರ್, ಬಿ.ಎಲ್. ಮುತ್ತಣ್ಣ, ಎಸ್.ಪಿ. ಲೋಕೇಶ್, ಎಸ್.ಆರ್. ಉತ್ತಯ್ಯ, ಎಸ್.ಟಿ. ಚಂದ್ರಾಜು, ಡಿ.ಪಿ. ಪರಮೇಶ್, ಕೆ.ಎಸ್. ಮಂಜುನಾಥ್, ಕೆ.ಎಸ್. ಲಿಂಗರಾಜು, ಎಸ್.ಸಿ. ಕಿಶನ್, ಕೆ.ಎನ್. ಮುತ್ತಣ್ಣ, ಬಿ.ಎನ್. ಪ್ರದೀಪ್, ಕೆ.ಎಸ್. ಸುಕನ್ಯ, ಬಿ.ಟಿ. ರತ್ನಾವತಿ ಅವರುಗಳನ್ನು ಆಯ್ಕೆ ಮಾಡಲಾಯಿತು.