ಸೋಮವಾರಪೇಟೆ,ಡಿ.8: ಇಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ತಾ. 9ರಂದು (ಇಂದು) ಹನುಮ ಜಯಂತಿಯನ್ನು ಆಚರಿಸಲಾಗುವದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ. ತಾ. 9ರಂದು ಬೆಳಿಗ್ಗೆ 6 ಗಂಟೆಯಿಂದ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, 10 ಗಂಟೆಗೆ ಮಾರುತಿ ಹೋಮ ಮತ್ತು ಪ್ರಸಾದ ವಿತರಣೆ, ಸಂಜೆ 6 ಗಂಟೆಗೆ ಸಹಸ್ರ ತುಳಸಿ ಅರ್ಚನೆ ಹಾಗೂ ವಿಶೇಷ ಪೂಜೆ, ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.