ಸುಂಟಿಕೊಪ್ಪ, ಡಿ. 8: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 63ನೇ ಪರಿರ್ವಾಣ ದಿನವನ್ನು ಇಲ್ಲಿ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಭೀಮವಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಪಿ.ರಾಜು ಮಾತನಾಡಿ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಶ್ರೇಷ್ಠವಾದುದು ಸಂವಿಧಾನ ಬದಲಿಸಬೇಕು ಎಂದು ಕೂಗು ಕೇಳಿ ಬರುತ್ತಿದ್ದು, ಅದು ಸರಿಯಲ್ಲ ಎಲ್ಲಾ ಜನಾಂಗದವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಅದರಲ್ಲೂ ಮಹಿಳೆಯರಿಗೂ ತಂದೆ ಆಸ್ತಿಯಲ್ಲಿ ಸಮಪಾಲು ನೀಡುವಲ್ಲಿ ಸಂವಿಧಾನ ರಚಿಸಿದ ಡಾ.ಅಂಬೇಡ್ಕರ್‍ರ ಪ್ರತಿಮೆ 193 ದೇಶದಲ್ಲಿ ಇದೆ ಎಂದು ಹೇಳಿದರು.

ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಎಲ್ಲಾ ಜನಾಂಗದವರಿಗೆ ಒಪ್ಪಿಗೆಯಾಗುವ ಸಂವಿಧಾನ ರಚಿಸಿದ ಅಂಬೇಡ್ಕರ್ ಮಾನವತಾವಾದಿ, ಮಹಿಳೆಯರು ಎಲ್ಲಾ ರಂಗದಲ್ಲೂ ಛಾಪು ಇಂದು ಮೂಡಿಸುತ್ತಿರುವದು ಮಹಿಳೆಯರಿಗೆ ಸಂವಿಧಾನದಲ್ಲಿ ಕಲ್ಪಿಸಿದ ಕೊಡುಗೆಯಿಂದ ಸಾಧ್ಯವಾಗಿದೆ ಎಂದೂ ಹೇಳಿದರು.

ಸುಂಟಿಕೊಪ್ಪ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್.ರವಿ, ಗ್ರಾ.ಪಂ. ನಿವೃತ್ತ ನೌಕರರಾದ ರಾಜಣ್ಣ, ಜಯಣ್ಣ, ಬೆಟ್ಟಪ್ಪ, ಮಂಜು, ಲಕ್ಷ್ಮಣ, ರಾಜು, ಟೈಲರ್ ಶಿವಣ್ಣ, ಧರ್ಮಸ್ಥಳ ಸಂಘದ ಒಕ್ಕೂಟದ ಮಾಜಿ ಅಧ್ಯಕ್ಷೆ ಸೆಲ್ವಿ ಸತೀಶ್ ಮತ್ತಿತರರು ಇದ್ದರು.