ಗೋಣಿಕೊಪ್ಪ ವರದಿ, ಡಿ. 8 : ಹಾಕಿಕೂರ್ಗ್ ಸಹಯೋಗದ ಗುಮ್ಮಟ್ಟೀರ ಸೋಮಯ್ಯ ಜ್ಞಾಪಕಾರ್ಥದ ಪುರುಷರ ಎ. ಲೀಗ್ ಹಾಕಿ ಸೆಮಿ ಫೈನಲ್ ಪಂದ್ಯ ಸೋಮವಾರ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯಲಿದೆ. ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಮತ್ತು ನಾಪೋಕ್ಲು ಶಿವಾಜಿ ಹಾಗೂ ಮಡಿಕೇರಿ ಚಾರ್ಮರ್ಸ್ ಮತ್ತು ಕುಂದ ಬೊಟ್ಯತ್ನಾಡ್ ತಂಡಗಳು ಸೆಣೆಸಲಿವೆ.