ಗೋಣಿಕೊಪ್ಪ ವರದಿ, ಡಿ. 8 : ಪಾಲಿಬೆಟ್ಟ ಟಾಟಾಕಾಫಿ ಮೈದಾನದಲ್ಲಿ ಕೂರ್ಗ್ ವೆಲ್‍ನೆಸ್ ಫೌಂಡೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಬರಿಗಾಲು ಓಟದ 42 ಕಿಲೋ ಮೀಟರ್ ದೂರದ ಸ್ಥಳೀಯರ ವಿಭಾಗದ ಓಟದಲ್ಲಿ ವೀರಾಜಪೇಟೆಯ ಎಸ್. ಗೌತಮ್, ಹೊರ ಜಿಲ್ಲಾ ವಿಭಾಗದಲ್ಲಿ ಧನಪ್ರಕಾಶ್ ಪ್ರಥಮ ಸ್ಥಾನ ಗಿಟ್ಟಿಕೊಂಡರು.ಮುಂಜಾನೆ 6 ಗಂಟೆಯಿಂದ ಮಧ್ಯಾಹ್ನದವರೆಗೂ ಕ್ರೀಡಾಕೂಟ ನಡೆಯಿತು. 400 ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡರು. ಪಾಲಿಬೆಟ್ಟ ಚೆಷೈರ್‍ಹೋಂ ವಿಶೇಷಚೇತನ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ವಿಶೇಷತೆ ಮೂಡಿಸಿದರು. ಬರಿಗಾಲಿನಲ್ಲಿ ಓಡಿ ಸಂಭ್ರಮಿಸಿದರು. ಕೊಡಗು ಮತ್ತು ಹೊರ ಜಿಲ್ಲೆಯವರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಿತು. 42, 21, 10, 5 ಕಿ. ಮೀ. ವಿಭಾಗದಲ್ಲಿ ಪ್ರತ್ಯೇಕ ಓಟ ಸ್ಪರ್ಧೆ ನಡೆಯಿತು.ವಿಜೇತರುಗಳು: ಸ್ಥಳೀಯ ವಿಭಾಗದ 42 ಕಿ. ಮೀ. ಓಟದಲ್ಲಿ ವೀರಾಜಪೇಟೆಯ ಎಸ್. ಗೌತಮ್ (ಪ್ರ), ಕೆ.ಜೆ. ಜೀತನ್ (ದ್ವಿ), ಹೊರಜಿಲ್ಲೆ ವಿಭಾಗದಲ್ಲಿ ಧನಪ್ರಕಾಶ್ (ಪ್ರ), ಸಂತೋಷ್ (ದ್ವಿ), 21 ಕಿ. ಮೀ. ಸ್ಥಳೀಯ ಪುರುಷರಲ್ಲಿ ಚಿಣ್ಣಪ್ಪ (ಪ್ರ), ನಿತಿನ್‍ಕುಮಾರ್ (ದ್ವಿ), ಮಹಿಳೆಯರಲ್ಲಿ ಎನ್. ಕಾವೇರಿ (ಪ್ರ), ಕೆ.ಕೆ. ಬೀನಾ (ದ್ವಿ), ಹೊರ ಜಿಲ್ಲಾ ವಿಭಾಗದ ಪುರುಷರಲ್ಲಿ ವಿಶ್ವನಾಥ್ (ಪ್ರ), ಗಿರಿದಾಸ್ (ದ್ವಿ), ಮಹಿಳೆಯರಲ್ಲಿ ಶ್ರೀನಿಜಾ (ಪ್ರ), ರುತ್ (ದ್ವಿ), 10 ಕಿ. ಮೀ. ಸ್ಥಳೀಯ ಪುರುಷರಲ್ಲಿ ಮುರುಳಿಧರ್ (ಪ್ರ), ಲೌಕಿ ಅಯ್ಯಪ್ಪ (ದ್ವಿ), ಮಹಿಳೆಯರಲ್ಲಿ ಚೈತ್ರ (ಪ್ರ), ಹೊರ ಜಿಲ್ಲಾ ವಿಭಾಗದ ಪುರುಷರಲ್ಲಿ ವಿನಯ್‍ಕುಮಾರ್ (ಪ್ರ), ಅಶ್ವಿನ್ (ದ್ವಿ), ಮಹಿಳೆಯರಲ್ಲಿ ರಮ್ಯ (ಪ್ರ), ರಿಜ್ವಾನಾ (ದ್ವಿ), 5 ಕಿ. ಮೀ. ಸ್ಥಳೀಯ ಪುರುಷರಲ್ಲಿ ವಿಷ್ಣು (ಪ್ರ), ನಂದಾ (ದ್ವಿ), ಮಹಿಳೆಯರಲ್ಲಿ ಕುಮ್‍ಕುಮ್ (ಪ್ರ), ಸೋನಿಕಾ (ದ್ವಿ), ಹೊರ ಜಿಲ್ಲೆಯ ಪುರುಷರಲ್ಲಿ ಅಫ್ಜಲ್ (ಪ್ರ), ಅವಿನಾಶ್ (ದ್ವಿ), ಮಹಿಳೆಯರಲ್ಲಿ ಪೂಜಿತಾ ಪ್ರಥಮ ಸ್ಥಾನ ಪಡೆದರು.
(ಮೊದಲ ಪುಟದಿಂದ)
ಪ್ರಥಮ, ದ್ವಿತೀಯ ನಗದು ಬಹುಮಾನವಾಗಿ 42 ಕಿ. ಮೀ. ವಿಜೇತರಿಗೆ 42 ಸಾವಿರ, 30 ಸಾವಿರ, 21 ಕಿ. ಮೀ. ವಿಜೇತರಿಗೆ 21 ಸಾವಿರ, 12 ಸಾವಿರ, 10 ಕಿ. ಮೀ. ವಿಜೇತರಿಗೆ 10 ಸಾವಿರ, 7 ಸಾವಿರ, 5 ಕಿ. ಮೀ. ವಿಜೇತರಿಗೆ 5 ಸಾವಿರ, 2 ಸಾವಿರ ನಗದು ಬಹುಮಾನ ನೀಡಲಾಯಿತು.
ಕೊಡಗಿನ ಹೊರ ಜಿಲ್ಲೆಯ ವಿಜೇತರಿಗೆ ನಗದು ಬಹುಮಾನದ ಬದಲು ಕೊಡಗಿನ ಆಹಾರ ಧಾನ್ಯ, ಕಾಫಿ, ಕಾಳುಮೆಣಸು, ಏಲಕ್ಕಿ ಇಂತಹವುಗಳನ್ನು ಗೋಣಿಚೀಲದ ಬ್ಯಾಗ್‍ನಲ್ಲಿ ನೀಡಲಾಯಿತು. ಕೊಡಗಿನ ವಿಜೇತರಿಗೆ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ನಗದು ಬಹುಮಾನ ನೀಡಲಾಯಿತು. ಕೊಡಗು ಪ್ರವಾಹದ ಸಂತ್ರಸ್ತರು ಆರಂಭಿಸಿರುವ ಉದ್ಯಮದ ಆಹಾರ ಉತ್ಪನ್ನಗಳನ್ನು ಬಹುಮಾನವಾಗಿ ನೀಡಲಾಯಿತು.
ಕೂರ್ಗ್ ವೆಲ್‍ನೆಸ್ ಫೌಂಡೇಶನ್ ಪ್ರಮುಖರಾದ ಚೆಪ್ಪುಡೀರ ನಿಕ್ಕಿ ಪೊನ್ನಪ್ಪ, ಕೊಡಂದೇರ ಹೀಮಾ ಗಣಪತಿ, ಕೊಡಂಗಡ ನಮೃತಾ ಮಾದಪ್ಪ, ಅಯ್ಯಪ್ಪ, ಚೇಂದ್ರಿಮಾಡ ವರುಣ್, ಅತಿಥಿ ಯುಕೋ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಬಹುಮಾನ ವಿತರಣೆ ಮಾಡಿದರು. ಹಿರಿಯರಾದ ನಡಿಕೇರಿಯಂಡ ರಮೇಶ್ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
- ಸುದ್ದಿಮನೆ