ಮಡಿಕೇರಿ, ಡಿ. 7: ಕೊಡಗಿನ ಕಾಫಿ, ಕರಿಮೆಣಸು ಬೆಳೆಗಾರರಿಗೆ ವರವಾಗಿದ್ದ “ಸಿಲ್ವರ್ ಓಕ್” ಮರಗಳಿಗೆ ಬಂದಿರುವ ರೋಗ ಅದರಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ತಾ. 7 ರ “ಶಕ್ತಿ” ಯಲ್ಲಿ ಬೆಳಕು ಚೆಲ್ಲಲಾಗಿದೆ. ಈ ಮಾರಕ ರೋಗ ಹರಡುವಂತಹ ಕಾಯಿಲೆಯಾಗಿದ್ದು ಬೆಳೆಗಾರರು ತಕ್ಷಣ ಎಚ್ಚೆತ್ತುಕೊಂಡು ಕಾರ್ಯೋನ್ಮುಖರಾಗುವಂತೆ ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ವಿಜ್ಞಾನಿ ವೀರೇಂದ್ರಕುಮಾರ್ ಸಲಹೆಯಿತ್ತಿದ್ದಾರೆ.ಈ ರೋಗ ಮಣ್ಣ್ಣಿನ ಮೂಲಕ ಬರುತ್ತದೆ. ಇದನ್ನು ಮಣ್ಣು ಜನ್ಯ ರೋಗವಾದ ಬೇರು ಕೊಳೆಯುವ ರೋಗವೆನ್ನಬಹುದು. ಇದರ ತೀವ್ರತೆಯಿರುವ ಸಿಲ್ವರ್ ಓಕ್ ಮರಗಳನ್ನು ಬೇರು ಸಹಿತ ಕೀಳಬೇಕು. ಆ ಕಿತ್ತ ಜಾಗಕ್ಕೆ ಸುಣ್ಣವನ್ನು ಸಿಂಪಡಿಸಬೇಕು. ಈ ರೋಗವು ಕಾಫಿ ಗಿಡಗಳಿಗೂ ಹರಡುತ್ತದೆ. ಗಿಡಗಳನ್ನು ಒಣಗಿಸಿಬಿಡುತ್ತದೆ. ಇದನ್ನು ತಪ್ಪಿಸಲು ಫಂಗಿಸೈಡ್ ಔಷಧಿಯಾದ ಕಾರ್ಬೆಂಡೆಝಿಂ (ಅಂಖಃಇಓಆಂZIಒ) ಸಿಂಪರಣೆಯನ್ನು ಒಂದು ಲೀಟರ್ ನೀರಿಗೆ 4 ಗ್ರಾಂನಂತೆ ಬೆರೆಸಿ ರೋಗ ಪೀಡಿತ ಮರ-ಗಿಡಗಳಿಗೆ ತಲಾ 10 ಲೀಟರ್ ನಂತೆ ಆಳವಾಗಿ ಗುಂಡಿ ತೆಗೆದು ಹಾಕಬೇಕು ಎಂದು ವೀರೇಂದ್ರಕುಮಾರ್ ಸಲಹೆಯಿತ್ತಿದ್ದಾರೆ.