ಸೋಮವಾರಪೇಟೆ, ಡಿ. 7: ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಕೋರಿಕೆ ಮೇರೆಗೆ, ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ ವಿವಿಧ ದೇವಾಲಯಗಳಿಗೆ ಒಟ್ಟು 55 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಆರ್.ಡಿ. ರವಿ ತಿಳಿಸಿದ್ದಾರೆ. ಸೋಮವಾರಪೇಟೆಯ ಆಂಜನೇಯ ದೇವಾಲಯ, ತಣ್ಣೀರುಹಳ್ಳ ಬಸವೇಶ್ವರ ದೇವಾಲಯ, ಮಾದಾ ಪಟ್ಟಣದ ಈಶ್ವರ ದೇವಾಲಯ, ಹಾಡಗೇರಿಯ ಮಹದೇವ ಈಶ್ವರ ದೇವಾಲಯ, ಹೊದ್ದೂರು ಭಗವತಿ ದೇವಾಲಯ, ಮತ್ತಿಕಾಡು ದಂಡಿನ ಮಾರಿಯಮ್ಮ ದೇವಾಲಯ, 7ನೇ ಹೊಸಕೋಟೆಯ ಮಹಾಲಿಂಗೇಶ್ವರ-ಗಣಪತಿ, ಸುಬ್ರಹ್ಮಣ್ಯ ದೇವಾಲಯ, ಸುಂಟಿಕೊಪ್ಪದ ಚಾಮುಂಡೇಶ್ವರಿ ದೇವಾಲಯ, ತೊರೆನೂರು ಬಸವೇಶ್ವರ ದೇವಾಲಯ, ಕಟ್ಟೆಮಾಡು ಮೃತ್ಯುಂಜಯ ದೇವಾಲಯ, ಮಡಿಕೇರಿ, ಮಲ್ಲಿಕಾರ್ಜುನ ನಗರದ ಕೋದಂಡರಾಮ ದೇವಾಲಯಗಳ ಅಭಿವೃದ್ಧಿಗೆ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಆರ್.ಡಿ. ರವಿ ತಿಳಿಸಿದ್ದಾರೆ.