ಮಡಿಕೇರಿ, ಡಿ. 7: ಹಾಕಿ ಕರ್ನಾಟಕ ವತಿಯಿಂದ ಬೆಂಗಳೂರಿನ ಫೀ.ಮಾ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆದ ಬಾಲಕರ ರಾಜ್ಯಮಟ್ಟದ ಸಬ್ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ಕ್ರೀಡಾ ಶಾಲೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೂಡಿಗೆ ‘ಎ’ ಕ್ರೀಡಾಶಾಲೆ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದಿದೆ.ಇಂದು ನಡೆದ ಅಂತಿಮ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ತಂಡ ಕೂಡಿಗೆ ತಂಡವನ್ನು 3-0 ಗೋಲಿನಿಂದ ಸೋಲಿಸಿದೆ. ಪೊನ್ನಂಪೇಟೆ ತಂಡದ ಸಿ.ಸಿ. ತಿಮ್ಮಯ್ಯ, ಬಿ.ಆರ್. ಬಿಪಿನ್ (2) ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಮೂರು ಹಾಗೂ ನಾಲ್ಕನೇ ಪಂದ್ಯಾವಳಿಯಲ್ಲಿ ಬಳ್ಳಾರಿ ತಂಡ ಹಾಕಿ ಕೂರ್ಗ್ ತಂಡವನ್ನು ಸೋಲಿಸಿ ಮೂರನೇ ಸ್ಥಾನ ಪಡೆಯಿತು. ಬಳ್ಳಾರಿಯ ರುದ್ರಪ್ಪ ಗೋಲು ಬಾರಿಸಿದರು.ಉತ್ತಮ ಗೋಲ್‍ಕೀಪರ್ ಪ್ರಶಸ್ತಿಯನ್ನು ಕೂಡಿಗೆಯ ಮಾಜ್, ಉತ್ತಮ ಹಿನ್ನಡೆ ಆಟಗಾರ ಹಾಕಿ ಕೂರ್ಗ್‍ನ (ಮೊದಲ ಪುಟದಿಂದ) ಸಿ.ಜೆ. ಪೂಣಚ್ಚ, ಹಾಫ್ ಬ್ಯಾಕ್ ಆಟಗಾರ ಬಳ್ಳಾರಿಯ ದಶ್ನ್ ನಾಯರ್, ಮುನ್ನಡೆ ಆಟಗಾರ ಪೊನ್ನಂಪೇಟೆಯ ಪಿ.ಪಿ. ಸಪನ್ ಅಯ್ಯಪ್ಪ ಪಂದ್ಯಾವಳಿಯ ಉತ್ತಮ ಆಟಗಾರ ಪ್ರಶಸ್ತಿಯನ್ನು ಪೊನ್ನಂಪೇಟೆಯ ಬಿ.ಆರ್. ಬಿಪಿನ್ ಪಡೆದುಕೊಂಡರು.ಪೊನ್ನಂಪೇಟೆ ತಂಡದ ತರಬೇತುದಾರರಾಗಿ ಬುಟ್ಟಿಯಂಡ ಚಂಗಪ್ಪ ಹಾಗೂ ಕುಪ್ಪಂಡ ಸುಬ್ಬಯ್ಯ ತೆರಳಿದ್ದರು. ಕೂಡಿಗೆ ತಂಡದ ಪರ ತರಬೇತುದಾರ ಎಂ.ಎಸ್. ಪ್ರಕಾಶ್ ತೆರಳಿದ್ದರು.