ಸೋಮವಾರಪೇಟೆ, ಡಿ. 7: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ತಾಲೂಕಿನ ತಣ್ಣೀರುಹಳ್ಳ ಅಂಗನವಾಡಿ ಹಾಗೂ ಜೇಸೀರೇಟ್ ಘಟಕದಿಂದ ವಳಗುಂದ ಅಂಗನವಾಡಿಗಳಿಗೆ ಉಚಿತವಾಗಿ ಆಸನಗಳನ್ನು ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಜೇಸೀ ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ್, ಅಂಗನವಾಡಿ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಆಸನಗಳನ್ನು ವಿತರಿಸಲಾಗಿದ್ದು, ಸಂಘ-ಸಂಸ್ಥೆಗಳು ಗ್ರಾಮೀಣ ಭಾಗದ ಶಾಲೆ, ಅಂಗನವಾಡಿಗಳಿಗೆ ಸೌಲಭ್ಯ ಒದಗಿಸಲು ಮುಂದಾಗಬೇಕೆಂದರು.

ಈ ಸಂದರ್ಭ ಜೇಸೀರೇಟ್ ಅಧ್ಯಕ್ಷೆ ಸುಮಲತ, ಜೇಸೀರೇಟ್ ಕಾರ್ಯದರ್ಶಿ ವಿದ್ಯಾ ಸೋಮೇಶ್, ಜೇಸೀ ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ, ಕಾರ್ಯದರ್ಶಿ ಉಷಾರಾಣಿ ಗುರುಪ್ರಸಾದ್, ಪದಾಧಿಕಾರಿ ಎಸ್.ಆರ್. ವಸಂತ್, ಸದಸ್ಯರುಗಳು, ಗ್ರಾ.ಪಂ. ಸದಸ್ಯರಾದ ಸೋಮಕ್ಕ, ಜಯಂತಿ, ಮಾಜಿ ಅಧ್ಯಕ್ಷೆ ಉಷಾ ರವೀಂದ್ರ, ಬಾಲವಿಕಾಸ ಸಮಿತಿಯ ಭವಾನಿ, ಲಲಿತ, ಅಂಗನವಾಡಿ ಕಾರ್ಯಕರ್ತೆಯರಾದ ಕುಸುಮ, ಫಲಿತ ಸೇರಿದಂತೆ ಇತರರು ಉಪಸ್ಥಿತರಿದ್ದರು.