ಮಡಿಕೇರಿ, ಡಿ. 7: ಜಿಲ್ಲಾ ಅಗ್ನಿಶಾಮಕ ಇಲಾಖೆ ಹಾಗೂ ಹಿಯರಿಂಗ್ ಟೆನೈಟಸ್ ಮತ್ತು ಇಂಪ್ಲಾಂಟ್ ಕ್ಲೀನಿಕ್ ಸಂಸ್ಥೆ ಸಹಕಾರದಲ್ಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಿಗೆ ಶ್ರವಣ ಪರೀಕ್ಷಾ ಉಚಿತ ಶಿಬಿರ ನಡೆಯಿತು. ನಗರದ ಅಗ್ನಿಶಾಮಕ ಕಚೇರಿಯಲ್ಲಿ ಸುಮಾರು 35 ಮಂದಿ ಸಿಬ್ಬಂದಿಗೆ ಶ್ರವಣ ಪರೀಕ್ಷೆ ಮಾಡಲಾಯಿತು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ. ಚಂದನ್ ಮಾತನಾಡಿ, ಪ್ರತಿಯೊಬ್ಬರಿಗೂ ಕಿವಿ, ಮೂಗು, ಗಂಟಲು ಅತಿ ಮುಖ್ಯ ಅಂಗಗಳಾಗಿದ್ದು, ಇವುಗಳಲ್ಲಿ ಶ್ರವಣವನ್ನು ಆಗಾಗ ಪರೀಕ್ಷಿಸಿ ಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳಿಗೆ ಶ್ರವಣ ಪರೀಕ್ಷಾ ಶಿಬಿರ ಏರ್ಪಡಿಸಲಾಗಿದೆ ಎಂದರು. ಶ್ರವಣ ತಜ್ಞರಾದ ಡಾ. ತಶ್ಮಿ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿರುವ ತಾಮಸ್ ಅಲೆಕ್ಸಾಂಡರ್ ಇತರರು ಇದ್ದರು.