ಮಡಿಕೇರಿ, ಡಿ. 7: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಜೀವನೋಪಾಯಕ್ಕೆ ರಸ್ತೆ ಬದಿ ಬೀದಿ ವ್ಯಾಪಾರ ನಿರತ ವ್ಯಾಪಾರಿಗಳ ಸಂಘಕ್ಕೆ ಕರ್ನಾಟಕ ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ತಾ. 21ರಂದು ಚುನಾವಣೆ ಘೋಷಿಸಲ್ಪಟ್ಟಿದೆ. ಈ ಸಂಬಂಧ ತಾ. 9ರಿಂದ 13ರ ತನಕ ಆಯ ಪಟ್ಟಣಗಳಲ್ಲಿ ಅರ್ಹ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸಂಬಂಧಿಸಿದ ಚುನಾವಣಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ, ಕುಶಾಲನಗರ ವ್ಯಾಪ್ತಿಯಲ್ಲಿ ತಲಾ 10 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಮೂವರು ಮಹಿಳಾ ಪ್ರತಿನಿಧಿ, ಇಬ್ಬರು ಸಾಮಾನ್ಯ ವರ್ಗ ಸೇರಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖಾತ ಹಾಗೂ ವಿಶೇಷ ಚೇತನ ಪ್ರತಿನಿಧಿಗಳ ತಲಾ ಒಂದೊಂದು ಸ್ಥಾನಕ್ಕೆ ಚುನಾವಣೆ ಜರುಗಲಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿನ ನಗರಸಭೆ ಹಾಗೂ ಆಯ ಪ.ಪಂ. ಕಚೇರಿಯಲ್ಲಿ ಮಾಹಿತಿಯೊಂದಿಗೆ ಸಂಬಂಧಿಸಿದ ಚುನಾವಣಾಧಿಕಾರಿ ಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.