ಗೋಣಿಕೊಪ್ಪಲು, ಡಿ. 7: ರೋಟರಿ ಕ್ಲಬ್‍ನ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಅವರು ಗೋಣಿಕೊಪ್ಪ ವಲಯ 6 ರ ಕಾರ್ಯಕ್ರಮವನ್ನು ಖುದ್ದು ವೀಕ್ಷಿಸಲು ತಾ. 9 ರಂದು ಗೋಣಿಕೊಪ್ಪಕ್ಕೆ ಆಗಮಿಸಲಿದ್ದಾರೆ ಎಂದು ಗೋಣಿಕೊಪ್ಪ ರೋಟರಿ ಕ್ಲಬ್‍ನ ಅಧ್ಯಕ್ಷ ಕಾಡ್ಯಮಾಡ ನೇವಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 9 ಗಂಟೆಗೆ ಅವರು ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತವಾಣಿ ಶಾಲೆಯ ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಲಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಧ್ವನಿ ವರ್ಧಕ ವಿತರಿಸಲಿದ್ದಾರೆ. ನಂತರ ಗೋಣಿಕೊಪ್ಪಲುವಿನ ಸೆಂಥೋಮಸ್ ಪ್ರೌಢಶಾಲೆಯಲ್ಲಿ ವೀರಾಜಪೇಟೆಯ ದಂತ ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ನಡೆಯುವ ದಂತ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟನೆ ಮಾಡಲಿದ್ದಾರೆ. 11.30ಕ್ಕೆ ಕೈಕೇರಿಯಲ್ಲಿ ರುವ ಗೋಣಿಕೊಪ್ಪಲುವಿನ ರೋಟರಿ ಸಮುದಾಯ ಭವನಕ್ಕೆ ಭೇಟಿ ನೀಡಲಿದ್ದು, ರೋಟರಿ ಸದಸ್ಯ ರೊಂದಿಗೆ ಸಭೆ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದ ಬಳಿ ಇರುವ ವೃದ್ಧಾಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 7 ಗಂಟೆಗೆ ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಇವರೊಂದಿಗೆ ಅತಿಥಿಗಳಾಗಿ ಸಹಾಯಕ ಗವರ್ನರ್ ಪಿ. ನಾಗೇಶ್, ವಲಯ ಕಾರ್ಯದರ್ಶಿ ಹೆಚ್.ಟಿ. ಅನೀಲ್, ವಲಯ ಜಡ್‍ಎಲ್ ಡಾ. ನರಸಿಂಹನ್ ಭಾಗವಹಿಸಲಿದ್ದಾರೆ.